Song: Haavadru kachchabaarda (ಹಾವಾದ್ರೂ ಕಚ್ಚಬಾರ್ದಾ), Movie: Yardo duddu yellamman jaathre (ಯಾರ್ದೋ ದುಡ್ಡು ಯಲ್ಲಮನ್‌ ಜಾತ್ರೆ)

ಹಾಡು: ಹಾವಾದ್ರೂ ಕಚ್ಚಬಾರ್ದಾ
ರಚನೆ: ವಿ.ಮನೋಹರ್
ಸಂಗೀತ:‌ ವಿ. ಮನೋಹರ್
ಗಾಯನ: ಜಗ್ಗೇಶ್‌
ಚಲನಚಿತ್ರ: ಯಾರ್ದೋ ದುಡ್ಡು ಯಲ್ಲಮನ್‌ ಜಾತ್ರೆ


ಅಯ್ಯೋ, ಅಯ್ಯೋ, ಅಯ್ಯೋ ಅಯ್ಯೋ, ನಿನ್‌ ಮನೆ ಕಾಯ್ವೋಗ
ದೀನ ದಯಾಳು ಧರ್ಮ ರತ್ನಾಕರ ರಾವ್‌ ಬಹದ್ದೂರ್‌ ರವಿಚಂದ್ರ ಶಾಸ್ತ್ರಿ ರಾಠೋಡರ ಮರಿ ಮೊಮ್ಮಗನಾದ
ನನ್ನ ಮನೆಗೆ ಕಾಗೆ ಹೊಕ್ದಂಗ್‌ ಹೊಕ್ಕು 
ನಮ್ಮನೆಯಿಂದ ನಂದೇ ಪಾತ್ರೆ ಪಗಡಿಗಳನ್ನೆಲ್ಲ ಹೊರಕ್ಕೆಸಿತಾಳಲ್ಲಪ್ಪ
ಇವಳಿಗೆ ಲಕ್ವ ಹೊಡ್ದು ಹಣೆಗಕ್ಕಿ ಇಕ್ಕಿ ಚಾಪೇಲ್‌ ಮುದುರ್ಕೊಂಡೋಗಿ
ಇವಳ್‌ ಮನೆ ಮುಂದೆ ಹೊಗೆ ಹಾಕ್ಸಿ, ಬಿದುರ್‌ ಮೋಟ್ರಲ್‌ ಮೆರವಣಿಗೆ ಓಗ
ಈ ಉರಿ ಮುಸುಡಿ, ನರಿ ಮುಸುಡಿಯ ಕಿರಿಕಿರಿಯ ಕರಿಮಾರಿಯ ಗುರ್‌ ಗುರ್‌ ಗೊಗ್ಗಯ್ಯಂಗೆ

ಹಾವಾದ್ರೂ ಕಚ್ಚಬಾರ್ದಾ, ಚೇಳಾದ್ರೂ ಕುಟ್ಕಬಾರ್ದಾ(೨)
ಹೊಟ್ಟೀಯ ನೋವು ಬಂದು, ಹಟ್ಟೀಯ ಈಡ್ಯಾಬಾರ್ದಾ
ನಾಕಾರು ಜ್ವರ ಬಂದು, ನಳ್ಳಾಡಿ ಸಾಯಬಾರ್ದಾ
ಕಳ್ಳೀ ಇವ್ಳ್‌ ತಲೆ ಮ್ಯಾಲ್‌ ಬಡಿಯ, ತಂದನ್ನ ತಾನಾನಾ
ತಂದನ್ನ ತಾನಾನಾ ತಂದನಾನಾ ತಾನಾನಾ
ತಂದನ್ನ ತಾನಾನಾ, ತಂದನಾನಾ ತಾನಾನಾ

ಮಾನ ಮರ್ಯಾದಿ ಬಿಟ್ಟೋರ್ಗೆ ಸಂತೆಲಿದ್ರೂ ಚಿಂತೆ ಇಲ್ವಂತೆ
ಪರ್ರನ್ನ ಕಿತ್ಕೊಂಡ್‌ ಉಣ್ಣೋರ್ಗ್‌ ಯಾವ್‌ ರೋಗಾನೂ ಬಡಿಯಲ್ವಂತೆ
ಈ ಪರಿಯಾಗ್‌ ಯಾರ್ದೋ ದುಡ್ಡಲ್‌ ಯಲ್ಲಮ್ಮನ್‌ ಜಾತ್ರೆ ನಡ್ಸೋ‌
ಈ ಮನೆಹಾಳೀನ, ಈ ಗುರ್‌ ಗುರ್‌ ಗೊಗ್ಗಯ್ಯನ್ನ ಒಂದಪ ಪ್ರೀತಿಯಿಂದ ಕ್ಯಾಕರ್ಸ್‌ ಉಗುದ್ಬುಡ್ಲಾ?

ಯಾಕ್‌ ಥೂ…
ಈಗ್ಲೂ ಸುಮ್ನವ್ರಲ್ಲಪ್ಪ ಶಿವಾ!

ಮಾತನಾಡೇ ಕಮಂಗಿ, ಮಾತನಾಡೇ ಕೋಡಂಗಿ (೨)
ಜಾಗ ಬಿಟ್ಟೋಡೇ ಬೇಗ, ಪೀಡೆ ತೊಲಗೋಗೆ ಕಮಲಾಂಗಿ
ಶಿವ್ನೇ, ತಿರ್ಪೆಯವ್ನ್‌ ತಂಗಿ
ಎದ್ದು ಬೀದಿಗೆ ಬಾರೇ, ಬಿದ್ದು ಊದ್ಲಿ ಮಾರೇ, ಹೇಯ್‌

ಅಕ್ಕ-ಪಕ್ದೋರ್ನೆಲ್ಲ ಬುಟ್ಟಿಗ್‌ ಹಾಕೊಂಡು ಮೆರಿತಾ ಇರೋ ಈ ಮಾಟಗಾತಿ ಮಾಯಾಂಗನೆಗೆ
ಮಂಗಳಾರ್ತಿ ಮಾಡಿ ಮನೆಯಿಂದಾಚೆ ಕಳ್ಸ್ಬೇಕಲ್ಲಪ್ಪ ಶಿವನೇ….ಇವ್ಳ್ಗೇ

ಜಲಮಲ ಕಟ್ಟಬಾರ್ದಾ, ಇಸ್ಬ್ರೋಗ ಬರಬಾರ್ದಾ
ಇವ್ರ್‌ ವಂಶ ನಿರ್ವಂಶಾಗೀ, ನೆಲಕಚ್ಚಿ ಹೋಗಬಾರ್ದಾ
ಮಾಯ್‌ ರೋಗ ಬಂದು ಇವ್ಳು, ಮಾಯ್ಪುರ ಸೇರಬಾರ್ದಾ
ಹಿಂತಿರುಗಿ ಬರದ ಹಂಗೆ, ನೆರಳೂನೂ ಸುಳೀದಂಗೆ, ತೊಲಗಿಸೋದು ಎಂಗೇ, ತಂದನ್ನ ತಾನಾನಾ
ತಂದನ್ನ ತಾನಾನಾ ತಂದನಾನಾ ತಾನಾನಾ
ತಂದನ್ನ ತಾನಾನಾ, ತಂದನಾನಾ ತಾನಾನಾ

ಹಾವಾದ್ರೂ ಕಚ್ಚಬಾರ್ದಾ, ಚೇಳಾದ್ರೂ ಕುಟ್ಕಬಾರ್ದಾ(೨)
ಹೊಟ್ಟೀಯ ನೋವು ಬಂದು, ಹಟ್ಟೀಯ ಈಡ್ಯಾಬಾರ್ದಾ
ನಾಕಾರು ಜ್ವರ ಬಂದು, ನಳ್ಳಾಡಿ ಸಾಯಬಾರ್ದಾ
ಕಳ್ಳೀ ಇವ್ಳ್‌ ತಲೆ ಮ್ಯಾಲ್‌ ಬಡಿಯ, ತಂದನ್ನ ತಾನಾನಾ
ತಂದನ್ನ ತಾನಾನಾ ತಂದನಾನಾ ತಾನಾನಾ
ತಂದನ್ನ ತಾನಾನಾ, ತಂದನಾನಾ ತಾನಾನಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)