Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

ಹಾಡು: ಈ ನನ್ನ ಕಣ್ಣಾಣೆ

ರಚನೆ:‌ ಕೆ. ಕಲ್ಯಾಣ್

ಸಂಗೀತ:‌ ಗುರುಕಿರಣ್

ಗಾಯನ: ಉದಿತ್‌ ನಾರಾಯಣ್‌, ಮಹಾಲಕ್ಷ್ಮಿ ಐಯ್ಯರ್

ಚಲನಚಿತ್ರ:‌ ಅಭಿ


ಈ ನನ್ನ ಕಣ್ಣಾಣೆ

ಈ ನನ್ನ ಎದೆಯಾಣೆ

ಈ ನನ್ನ ಮನದಾಣೆ

ಈ ನನ್ನ ಉಸಿರಾಣೆ

ಏ, ಹುಡುಗಾ ನೀ ನನ್ನ ಪ್ರಾಣ ಕಣೋ


ಈ ನನ್ನ ಕಣ್ಣಾಣೆ

ಈ ನನ್ನ ಎದೆಯಾಣೆ

ಈ ನನ್ನ ಮನದಾಣೆ

ಈ ನನ್ನ ಉಸಿರಾಣೆ


ನಂಗೂ ನಿಂಗೂ ಇನ್ನೂ ಹೊಸದು, ಇಂಥ ಅನುಭವ

ಕಂಡು ಕಂಡು ಎದೆಯಾ ಒಳಗೆ, ಏನೋ ಕಲರವ


ಸದಾ,  ಸದಾ ವೈಯ್ಯಾರದ, ಪದ, ಪದ ಬೆಸೆದಿದೆ

ಹೊಸ, ಹೊಸ, ಶೃಂಗಾರದ, ರಸರಾಗ ಲಹರಿಯ ಹರಿಸುತಿದೆ


ಓ ಒಲವೇ, ಒಲವೆಂಬ ಒಲವಿಲ್ಲಿದೆ


ಈ ನನ್ನ ಕಣ್ಣಾಣೆ

ಈ ನನ್ನ ಎದೆಯಾಣೆ

ಈ ನನ್ನ ಮನದಾಣೆ

ಈ ನನ್ನ ಉಸಿರಾಣೆ


ಪ್ರೀತಿ ಒಂದು ಗಾಳಿಯ ಹಾಗೆ, ಗಾಳಿಮಾತಲ್ಲ

ಪ್ರೀತಿ ಹರಿಯೊ ನೀರಿನ ಹಾಗೆ, ನಿಂತ ನೀರಲ್ಲ


 ಅದು, ಒಂದು, ಜ್ಯೋತಿಯ ಹಾಗೆ 

ಸುಡೋ, ಸುಡೋ ಬೆಂಕಿಯಲ್ಲ


ಅದು, ಒಂದು,ಭುವಿಯ ಹಾಗೆ

ನಿರಂತರ ಈ ಪ್ರೇಮಸ್ವರ


ಈ, ಪ್ರೀತಿ, ಆಕಾಶಕೂ ಎತ್ತರ


ಹೋ,ಈ ನನ್ನ ಕಣ್ಣಾಣೆ

ಈ ನನ್ನ ಎದೆಯಾಣೆ

ಈ ನನ್ನ ಮನದಾಣೆ

ಈ ನನ್ನ ಉಸಿರಾಣೆ


ಏ, ಹುಡುಗೀ ನೀ ನನ್ನ ಪ್ರಾಣ ಕಣೇ





 





 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Soundarya samara (ಸೌಂದರ್ಯ ಸಮರ), Movie: Kaddipudi (ಕಡ್ಡಿಪುಡಿ)

Song: Hesaru poorthi helade, Movie: Paramathma

Song: Onde usirante (ಒಂದೇ ಉಸಿರಂತೆ) Movie: Snehaloka (ಸ್ನೇಹಲೋಕ)