Song: Onde usirante (ಒಂದೇ ಉಸಿರಂತೆ) Movie: Snehaloka (ಸ್ನೇಹಲೋಕ)

ಹಾಡು: ಒಂದೇ ಉಸಿರಂತೆ
ರಚನೆ:‌ ಹಂಸಲೇಖ
ಸಂಗೀತ: ಹಂಸಲೇಖ
ಗಾಯನ: ರಾಜೇಶ್‌ ಕೃಷ್ಣನ್‌, ಕೆ.ಎಸ್.‌ ಚಿತ್ರ
ಚಲನಚಿತ್ರ: ಸ್ನೇಹಲೋಕ

ಹಾಡು ಹಾಡು, ಒಂದು ಹಾಡು ಹಾಡು
ಹಾಡದಿದ್ದರೆ ನನ್ನ ಹಾಡು ಕೇಳು

ಉಸಿರು ಕಟ್ಟಿ ಹಾಡುವೆ ಈ ಹಾಡು
ಈ ಉಸಿರು ನಿಂತರೆ ನಿನಗೆ ನಷ್ಟ ನೋಡು

ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು, ನೀನೇ ನಾನು ನಾನೇ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು, ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೇ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೇ ನನ್ನ ಕೊರಳಿನಲಿ
ನಿನ್ನ ಹೆಸರೆ ಕೊನೆಯ ಮಾತು, ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ, ಕೊಡುವೆ ನನ್ನ ಪ್ರಾಣ ಪ್ರೀತಿ

ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಅಲ್ಲ ಇನ್ನು, ನೀನೇ ನಾನು ನಾನೇ ನೀನು
ಎತ್ತ ಇತ್ತು ಎಂತು ಬಂತೋ ಕಾಣೆ ನಾನು 
ಒಂದೇ ಧೈರ್ಯ ಒಂದೇ ಹುರುಪು, ಹಾಡೋ ಹಂಬಲ ತಂದೆ ನೀನು 
ಕೋಟಿ ಕೋಗಿಲೇ ಒಂದೇ ಉಸಿರಿನಲಿ
ಪ್ರೀತಿ ಮಾಡು ಪ್ರೀತಿಯ ಬೇಡು ಅಂದಿದೆ ಅಂದಿದೆ ಹಾಡಿದೆ ಹೆಣ್ಣೆದೆ
ಅಂತರಂಗದ ಸಹ್ಯಾದ್ರಿ ಮಡಿಲಲಿ
ನೂರು ನವಿಲಾಗಿ ಹೃದಯ ಆಡಿದೆ ಆಡಿದೆ ಕುಣಿದಿದೆ ಕುಣಿದಿದೆ 
ಕಾದಿದೆ ಕಾದಿದೆ ಪ್ರೀತಿ ನೀಡಲು ಒಂದೇ ಉಸಿರಲಿ ನಿಂತಿದೆ ನಿಂತಿದೆ

ಇಂದು ಪ್ರೀತಿಯು ಹಾಡಿದ ಪರ್ವ ದಿನ(೨) 
ಅದ ಕೇಳಲು ದಕ್ಕಿದ ಪುಣ್ಯ ದಿನ
ಅದು ಬೆಳಕಂತೆ ಮುಟ್ಟಲಾಗದಂತೆ ಬೆಳದಿಂಗಳಂತೆ ಅಪ್ಪಲಾಗದಂತೆ
ಗೆಳತಿ ಗೆಳತಿ ಪ್ರೀತಿಯ ಗೆಳತಿ ನೀನೇ ನನ್ನೀ ಪ್ರೀತಿಯ ಒಡತಿ
ಬ್ರಹ್ಮ ಭಾರೀ ಜಾಣ ಜಾಣ ನಾರೀಲಿಟ್ಟ ಪ್ರೀತಿ ಪ್ರಾಣ
ನಾರಿ ನೀನೇ ಪ್ರೀತಿಯ ರೂಪ ನೀನೇ ತಾನೆ ಹೃದಯದ ದೀಪ
ಹೊತ್ತಿಕೊಂಡಿತಮ್ಮ ನಮ್ಮ ಪ್ರೀತಿ ಜ್ಯೋತಿ
ಗಾಳಿ ಅಲ್ಲ ಮಳೆಯೂ ಅಲ್ಲ ಭೂಮಿ ಬಿರಿದರು ಆರೋದಿಲ್ಲ
ಒಂದೇ ದೀಪದಂತೆ ಇನ್ನು ನಾನು ನೀನು
ಎಣ್ಣೆ ದಾರ ಬೇರೆ ಏನು ಬೇರೆ ಎಂದರೆ ಅರ್ಥ ಏನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗೂ ಹೋಲಿಸು
ಚಂದಮಾಮನೇ ಕೇಳೋ ನಮ್ಮಾಣೆಯಾ
ನಮ್ಮಿಂದಂತೂ ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗು ಆಗದು
ಆಗುವುದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ

ಚಂದನ ಚಂದನ ಕಂಪಿನ ಚಂದನ ನಿನ್ನೀ ಉಸಿರಿನ ಕಸ್ತೂರಿ ಸಿಂಚನ
ಕಂಪನ ಕಂಪನ ಇಂಪಿನ ಕಂಪನ ನಿನ್ನೀ ಮಾತಿನ ಅಮೃತ ಸಿಂಚನ
ಗಾಯನ ಗಾಯನ ನಿನ್ನೀ ಪ್ರೀತಿಯ ಜೀವನ ಚೇತನ ಗಾಯನ ಗಾಯನ
ಅಯನ ಅಯನ ನಿನ್ನ ನೆರಳಲಿ ನನ್ನೀ ಜನುಮದ ಪ್ರೇಮಾಯಣ
ನಡೆ ಕಲ್ಲಿರಲಿ ಕಲ್ಲು ಮುಳ್ಳಿರಲಿ
ಕಲ್ಲಿರಲಿ ಕಲ್ಲು ಮುಳ್ಳಿರಲಿ ನಡೆ ಮಳೆಯಿರಲಿ ಮಳೆ ಬಿಸಿಲಿರಲಿ
ಪ್ರೇಮಾಯನಕೆ ನಿನ್ನ ನೆರಳಿರಲಿ ಜನುಮಾಲಯಕೆ ನಿನ್ನ ಸೊಡರಿರಲಿ
ಭಯವಿಲ್ಲ ಇನ್ನು ಭಯವಿಲ್ಲ ನನ್ನ ನಿರ್ಧಾರ ಇನ್ನು ನನದಲ್ಲ
ನನ್ನ ಎದೆಯಲೊಬ್ಬ ಚಂದ್ರ ಬೆಳ್ಳಿ ಬೆಳಕ ತಂದ ತಂದ
ಪ್ರೀತಿ ಅಂದರೇನು ಅಂದ ಕೇಳಿ ತಾನೇ ಉತ್ತರ ತಂದ
ಸ್ವಚ್ಛ ಬಿಳುಪಿನಂತೆ ಇನ್ನು ನಾನು ನೀನು
ಏಳು ಬಣ್ಣ ಸೇರಿ ಬಿಳುಪಾದ ಹಾಗೆ ನಾನು ನೀನು
ಒಂದೇ ಹಾಡಂತೆ ಇನ್ನು ನಾನು ನೀನು
ಎಲ್ಲ ಭಾವ ಕೂಡಿಕೊಂಡ ಬಾಳಿನಂತೆ ನಾನು ನೀನು
ಚಂದಮಾಮನೇ ನೋಡೋ ನಮ್ಮಿಬ್ಬರ
ನೀನು ಕಂಡ ಪ್ರೇಮಿಗಳಲ್ಲಿ ನಮ್ಮನು ಸೇರಿಸು ಅವರಿಗೂ ಹೋಲಿಸು
ಚಂದಮಾಮನೇ ಕೇಳೋ ನಮ್ಮಾಣೆಯಾ
ನಮ್ಮಿಂದಂತೂ ಪ್ರೀತಿಗೆ ದ್ರೋಹ ಆಗದು ಆಗದು ಎಂದಿಗು ಆಗದು
ಆಗುವುದಾದರೆ ಇಂದೇ ಆಗಲಿ ಆಗುವ ಮೊದಲೇ ಪ್ರಾಣ ಹೋಗಲಿ

ಒಂದೇ ಉಸಿರಂತೆ ಇನ್ನು ನಾನು ನೀನು
ನಾನು ನೀನು ಬೇರೆ ಏನು, ನೀನೇ ನಾನು ನಾನೇ ನೀನು
ಒಂದೇ ಕಡಲಂತೆ ಇನ್ನು ನಾನು ನೀನು
ತೀರ ಸಾಗರ ಬೇರೆ ಏನು, ಬೇರೆ ಎಂದರೆ ಅರ್ಥ ಏನು
ಹಾಡೇ ಕೋಗಿಲೇ ಒಂದೇ ಉಸಿರಿನಲಿ
ಚಂದಿರನನ್ನು ಚಂದಿರನೆನ್ನಲು ಅಂಜಿಕೆಯೇನು ಅಳುಕಿನ್ನೇನು
ಕೇಳೇ ಕೋಗಿಲೇ ನನ್ನ ಕೊರಳಿನಲಿ
ನಿನ್ನ ಹೆಸರೆ ಕೊನೆಯ ಮಾತು, ಕೊನೆಯ ನಾದ ಕೊನೆಯ ವೇದ
ಪ್ರೀತಿ ಪ್ರೀತಿ ಪ್ರೀತಿ ಪ್ರೀತಿ, ಕೊಡುವೆ ನನ್ನ ಪ್ರಾಣ ಪ್ರೀತಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)