Song: ಗುಡ್‌ ಮಾರ್ನಿಂಗ್(Good morning)

ಹಾಡು: ಗುಡ್‌ ಮಾರ್ನಿಂಗ್
ರಚನೆ:‌ ಆಲ್‌ ಓಕೆ
ಸಂಗೀತ:‌ ಆಲ್‌ ಓಕೆ
ಗಾಯನ: ಆಲ್‌ ಓಕೆ


ಗುಡ್‌ ವೈಬ್ಸ್‌ ಒಳಗೆಳೆಯುತ
ಬ್ಯಾಡ್‌ ವೈಬ್ಸ್‌ ಹೊರಗೂದುತ

ಗುಮ್‌ ಅಂತ ಕಣ್ಮುಚ್ಚಿಕೊಂಡು 
ನಿನ್ನ ಧ್ಯಾನ ಮಾಡ್ವೆ ತಲೆದೂಗುತ

ಒಳ್ಳೆತನಕೆಂದೂ ಸ್ವಾಗತ
ಕೆಟ್ಟತನವಾಗ್ಲಿ ಭೂಗತ

ದೇವನೊಬ್ಬ ಒಳಗಿರುವನೆಂದು
ನೀ ಬಾಳ್ವೆ ನಡೆಸಿದೊಳ್‌ ಅದ್ಭುತ

ಸರಿ‌ ಕೇಳ್
ಜಗದಲಿ ಜಿಗಿದಬ್ಬರಿಸಿ
ದವಸ ಪೊಗರಿದೋಳ್‌
ಕಮರು ಕಬ್ಬರವೆ

ದಿನದಲಿ ಒಲವನು ಇರಿಸಿ ದೈವ ನೇತ್ರನನ್‌ ನೆಚ್ಚಿ ನೆನೆ ಮನವೆ
ನಿಚ್ಚ ಮನದಿ ಸರಿ ದಾರಿ ತೋರು ನೀ ಪ್ರಬಲ ಮುಂದೆ ತಲೆ ಎತ್ತುವೆ
ಸ್ವಚ್ಛ ಗುಣವ ದಯಪಾಲಿಸೆನಗೆ ನಾ ಪ್ರೀತಿಗಾಗಿ ತಲೆಬಾಗುವೆ

ಹೆಜ್ಜೆ ಹಜ್ಜೆಗೂ ಗಾಲಿಗರಿಲ್ಲಿ ಮಿತ್ರ ತೆಗಳಿದೊಳ್ ಬೆಳೆಯುವುದೆಲ್ಲಿ
ಜಾತಿ ಬೇಧವ ಮಾಡುವ ಮನುಜರ ಮಧ್ಯೆ ಇದ್ರೆ ಸಹಬಾಳ್ವೆ ಎಲ್ಲಿ
ಹೊಸ ದಾರಿಯನ್ನು ನೀ ತೋರಿಸು ಮನಮಂದಿರವನ್ನು ರಕ್ಷಿಸು
ನನ್ನ ಅಹಂ ಅನ್ನುನೀ ಕ್ಷೀಣಿಸಿ ಮನದಲ್‌ ಸೂರ್ಯೋದಯವನು ತೋರಿಸು

ಏಸುಕಾಯಂಗಳ ಕಳೆದು 
ಎಂಭತ್ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ಶರೀರ(೨)

ತಾನಲ್ಲ ತನ್ನದಲ್ಲ(೨)
ಆಸೆ ತರವಲ್ಲ, ಮುಂದೆ ಬಾಹೋದಲ್ಲ

ದಾಸನಾಗು, ವಿಶೇಷನಾಗು

ನೊಂದಿದ್ದೆ ಯಾರೂ ಇಲ್ಲ ಅಂತ
ಈಗ ಒಂಟಿತನದ ಬೆಲೆ ಗೊತ್ತು

ನಂಬಿಕೆ ತುಂಬ ಇಡ್ತಿದ್ದೆ
ಈಗ ಬೆನ್ನು ತುಂಬ ಬರಿ ಕುರುಪು

ಜೀವನ ಎಷ್ಟೇ ಪಾಠ ಕಲಿಸಿದರೂ
ಕಡಿಮೆಯಾಗದೀ ಹುರುಪು
ನಿಜಪ್ರೀತಿ ಎಲ್ಲೂ ಸಿಗೋದಿಲ್ಲ
ನಿನ್ನ ತಂದೆ ತಾಯಿಯ ಹೊರತು

ಯಾರೋ ಇಲ್ಲಿ ಬಡವ, ಯಾರೋ ಇಲ್ಲಿ ಶ್ರೀಮಂತ
ನಿನ್ನ ಕರ್ಮದ ಫಲಾನುಫಲಗಳು ಹೇಳ್ವುದು ನೀನು ಏನಂತ
ಉತ್ತಮ ಮಧ್ಯಮ ಅಧಮ ಎಲ್ಲ ಒಂದೇ ಇಲ್ಲಿ ಇರೋತನಕ

ನಿನ್ನ ನಂಬಿಕೆ ಒಂದೇ ಕಾಯೋದು ಕೊನೆತನಕ

ನಗುವರಾ? ನೋಡ್‌ ನಗಲಿ
ಕಾಲೆಳೆವರಾ? ಕಾಳೆಳಿಲಿ
ನೀ ನಗುನಗುತ ಮುಂದೆ ನಡಿತಿರು
ನಿನ್ನ ಕೆಲ್ಸ ಮಾತ್ರ ಮಾತಾಡ್ಲಿ

ಸೋಲುತೀಯ ಅಂದೋರಿಗೆಲ್ಲ ನೀ ಗೆದ್ದು ತೋರಿಸು ಬದಲು
ದೊಡ್ಡ ಸಾಧನೆಗೆ ಚಿಕ್ಕ ಅಂಬೆಗಾಲಿಂದ ಶುರು ಮಾಡು ಮೊದಲು

ಏಸುಕಾಯಂಗಳ ಕಳೆದು 
ಎಂಭತ್ನಾಲ್ಕು ಲಕ್ಷ ಜೀವ ರಾಶಿಯನ್ನು ದಾಟಿ ಬಂದ ಈ ಶರೀರ(೨)

ತಾನಲ್ಲ ತನ್ನದಲ್ಲ(೨)
ಆಸೆ ತರವಲ್ಲ, ಮುಂದೆ ಬಾಹೋದಲ್ಲ

ದಾಸನಾಗು, ವಿಶೇಷನಾಗು(೪)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)