Song: Negila hidida [ನೇಗಿಲ ಹಿಡಿದ (ಉಳುವ ಯೋಗಿಯ ನೋಡಲ್ಲಿ)], Movie: Kaamanabillu (ಕಾಮನಬಿಲ್ಲು)


ಹಾಡು: ನೇಗಿಲ ಹಿಡಿದ (ಉಳುವ ಯೋಗಿಯ ನೋಡಲ್ಲಿ)
ರಚನೆ:‌ ಕುವೆಂಪು
ಸಂಗೀತ:‌ ಉಪೇಂದ್ರ ಕುಮಾರ್
ಗಾಯನ: ಸಿ. ಅಶ್ವತ್ಥ್ 
ಚಲನಚಿತ್ರ:‌ ಕಾಮನಬಿಲ್ಲು 

ಓ….ಓಒಒ..ಓ ಹೋ ಓ….

ನೇಗಿಲ ಹಿಡಿದ  ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ, ಓ{೨}

ಫಲವನು ಬಯಸದೆ ಸೇವೆಯೆ ಪೂಜೆಯು,
ಕರ್ಮವೇ ಇಹಪರ ಸಾಧನವು
ಕಷ್ಟದೊಳನ್ನವ ದುಡಿವನೆ ತ್ಯಾಗಿ,
ಸೃಷ್ಠಿನಿಯಮದೊಳಗವನೇ ಭೋಗಿ.
                                           
ಉಳುವ ಯೋಗಿಯ ನೋಡಲ್ಲಿ, ಉಳುವಾ ಯೋಗಿಯ ನೋಡಲ್ಲಿ 
ಹೇ….ಏ ಏ ಏ

ಲೋಕದೊಳೇನೆ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ

ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ
ಹಾರಲಿ ಗದ್ದುಗೆ ಮುಕುಟಗಳು{೨)

ಮುತ್ತಿಗೆ ಹಾಕಲಿ ಸೈನಿಕರೆಲ್ಲ(೨)
ಬಿತ್ತುಳುವುದನವ ಬಿಡುವುದೇ ಇಲ್ಲ(೨)

ಉಳುವ ಯೋಗಿಯ ನೋಡಲ್ಲಿ, ಉಳುವಾ ಯೋಗಿಯ ನೋಡಲ್ಲಿ 
ಹೇ….ಏ ಏ ಏ                                       ..

ಯಾರೂ ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು{೨}

ಹೆಸರನು ಬಯಸದೆ ಅತಿಸುಖಕೆಳಸದೆ,
ದುಡಿವನು ಗೌರವಕಾಶಿಸದೆ

ನೇಗಿಲ ಕುಲದೊಳಗಡಗಿದೆ ಕರ್ಮಾ, ಹೋ…
ನೇಗಿಲ ಕುಲದೊಳಗಡಗಿದೆ ಕರ್ಮಾ
ನೇಗಿಲ ಮೇಲೆಯೇ ನಿಂತಿದೆ ಧರ್ಮ(೨)

ಉಳುವ ಯೋಗಿಯ ನೋಡಲ್ಲಿ, ಉಳುವಾ ಯೋಗಿಯ ನೋಡಲ್ಲಿ 
ಹೇ….ಏ ಏ ಏ

ಉಳುವ ಯೋಗಿಯ ನೋಡಲ್ಲಿ(೪)          

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Hesaru poorthi helade, Movie: Paramathma

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Soundarya samara (ಸೌಂದರ್ಯ ಸಮರ), Movie: Kaddipudi (ಕಡ್ಡಿಪುಡಿ)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)