Song: Loka Maya bazaru (ಲೋಕ ಮಾಯಾಬಜ಼ಾರು), Movie: Maya Bazar 2016 (ಮಾಯಾಬಜ಼ಾರ್‌ ೨೦೧೬)

ಹಾಡು: ಲೋಕ ಮಾಯಾಬಜ಼ಾರು 

ರಚನೆ: ಯೋಗರಾಜ್‌ ಭಟ್

ಸಂಗೀತ: ಮಿಧುನ್‌ ಮುಕುಂದನ್

ಗಾಯನ: ಎಸ್.‌ ಪಿ. ಬಾಲಸುಬ್ರಹ್ಮಣ್ಯಂ

ಚಲನಚಿತ್ರ: ಮಾಯಾಬಜ಼ಾರ್‌ ೨೦೧೬

 

ತಾರಾ ತಿಗಡಿ ಪಾತಾಳ್‌ಗರಡಿ

ತಳಕು ಬಳಕು ಬೆಳ್ಳಂಬೆಳಕು

ಲಕಲಕ ಲಕಲಕ ಲೋಕ ನಮ್ದು ಮಾಯಾಬಜ಼ಾರು  

 

ಬಣ್ಣದ ಬಾಳು ಬೆಣ್ಣೆ ಮಾತು

ನೀರಿನ ಮ್ಯಾಲೆ ದೋಣಿ ತೂತು

ಸುಳ್ಳಿನ ಸಂತೆಯಲ್ಲಿ ಸತ್ಯ ಡುಮ್ಕಿಡಮಾರು

 

ಭಗವಂತಂಗೆ ಕೆಳಗೆ ಕರೆದು ಬುದ್ಧಿ ಹೇಳೋಣ

ನಾಳೆ ಇಂದ ನಾವೇ ದೇವರಾಗಿ ಬಿಡೋಣ

ಯಾವ್ದು ಹೆಂಗಾನ ಹಾಳಾಗೋಗ್ಲಿ ಕಾಸು ಮಾಡೋಣ

 

ಅನ್ಕೊಂಡಿದ್ದೆಲ್ಲ, ಯಾವತ್ತೂ ಆಗಲ್ಲ

ಬಂದಂಗೆ ಬದುಕೋಕೆ ಇಲ್ಲಿ ಯಾರೂ ರೆಡಿ ಇಲ್ಲ

ಲೈಫಲ್ಲೇನಾದ್ರೂ, ಕಿತ್ತು ದಬ್ಬಾಕು

ಆಗಿಲ್ಲ ಅಂದ್ರೆ ಹೇಳು ಲೋಕ ಚೂರೂ ಸರಿ ಇಲ್ಲ

 

ದುಡ್ಡು ಎಂಬುದು ದಡ್ಡರ ರೋಗ

ಆರು ಮೂರಡಿ ಅಂತಿಮ ಜಾಗ

 

ಆದರೂ, ಹೆಂಗಾದರೂ

ಒಂದೊಳ್ಳೆ ಸೈಟು ಬುಕ್ಕು ಮಾಡೋಣ

 

ನಿಮಗೂ ಗೊತ್ತು ನಮಗೂ ಗೊತ್ತು

ಕಾಲ ಎಂದೋ ಕುಲಗೆಟ್ಟೋಯ್ತು

ಲಕ್ಕಿ ಆಫರ್‌ ಲೋಕ ನಮ್ದು ಮಾಯಾಬಜ಼ಾರು

 

ಬಣ್ಣದ ಬಾಳು ಬೆಣ್ಣೆ ಮಾತು

ನೀರಿನ ಮ್ಯಾಲೆ ದೋಣಿ ತೂತು

ಸುಳ್ಳಿನ ಸಂತೆಯಲ್ಲಿ ಸತ್ಯ ಡುಮ್ಕಿಡಮಾರು

 

ಭಗವಂತಂಗೆ ಬುದ್ಧಿ ಇಲ್ಲ ನಾವೇನ್‌ ಮಾಡೋಣ

ನಾಳೆ ಇಂದ ನಾವೇ ದೇವರಾಗಿ ಬಿಡೋಣ

ಯಾವ್ದು ಹೆಂಗಾನ ಹಾಳಾಗೋಗ್ಲಿ ಕಾಸು ಮಾಡೋಣ

 

 

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)