Song: Deepadinda deepava (ದೀಪದಿಂದ ದೀಪವ), Movie: Nanjundi (ನಂಜುಂಡಿ)

ಹಾಡು: ದೀಪದಿಂದ ದೀಪವ

ರಚನೆ: ಹಂಸಲೇಖ

ಸಂಗೀತ: ಹಂಸಲೇಖ

ಗಾಯನ: ಮಧು ಬಾಲಕೃಷ್ಣ, ನಂದಿತ

ಚಲನಚಿತ್ರ: ನಂಜುಂಡಿ

 

ದೀಪದಿಂದ ದೀಪವ….ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಿರೋ

  

ದೀಪದಿಂದ ದೀಪವ, ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಮನಸಿನಿಂದ ಮನಸನು, ಬೆಳಗಬೇಕು ಮಾನವ

ಮೇಲು-ಕೀಳು ಭೇದ ನಿಲ್ಲಲು

 

ಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ...ನೀ ತಿಳಿಯೋ

 

ದೀಪದಿಂದ ದೀಪವ, ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

 

ಹೋ, ಹೋಹೋಹೋ, ಹೋಒಒಒ ಓ ಹೊಹೋಹೋಹೋ

ಹೊಒಓಓ ಹೊಓಓ ಓಓಓ{೨}

 

ಆಸೆ ಹಿಂದೆ ದುಃಖ ಎಂದರು, ರಾತ್ರಿ ಹಿಂದೆ ಹಗಲು ಎಂದರು

ದ್ವೇಷವೆಂದೂ ಹೊರೆ ಎಂದರು, ಹಬ್ಬವದಕೆ ಹೆಗಲು ಎಂದರು

 

ಎರಡು ಮುಖದ ನಮ್ಮ ಜನುಮದ ವೇಷಾವಳಿ

ತೆಗೆದು ಹಾಲ್ಬೆಳಕ ಕುಡಿವುದೇ, ದೀಪಾವಳಿ

 

ದೀಪದಿಂದ ದೀಪವ, ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ...ನೀ ತಿಳಿಯೋ

ದೀಪದಿಂದ ದೀಪವ, ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

 

ಮಣ್ಣಿನಿಂದ ಹಣತೆಯಾದರೆ, ಬೀಜದಿಂದ ಎಣ್ಣೆಯಾಯಿತು

ಅರಳೆಯಿಂದ ಬತ್ತಿಯಾದರೆ, ಸುಡುವ ಬೆಂಕಿ ಜ್ಯೋತಿಯಾಯಿತು

 

ನಂದಿಸುವುದು ತುಂಬ ಸುಲಭವೋ, ಹೇ ಮಾನವ

ಆನಂದಿಸುವುದು ತುಂಬ ಕಠಿಣವೋ, ಹೇ ದಾನವ

 

ದೀಪದಿಂದ ದೀಪವ, ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಭೇದವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ...ನೀ ತಿಳಿಯೋ

ದೀಪದಿಂದ ದೀಪವ, ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)