Song: Deepavali deepavali (ದೀಪಾವಳಿ ದೀಪಾವಳಿ), Movie: Muddina maava (ಮುದ್ದಿನ ಮಾವ)

ಹಾಡು: ದೀಪಾವಳಿ ದೀಪಾವಳಿ

ರಚನೆ: ಹಂಸಲೇಖ

ಸಂಗೀತ: ಎಸ್‌ ಪಿ. ಬಾಲಸುಬ್ರಹ್ಮಣ್ಯಂ

ಗಾಯನ: ಡಾ. ರಾಜ್‌ಕುಮಾರ್‌, ಎಸ್.‌ ಪಿ. ಬಾಲಸುಬ್ರಹ್ಮಣ್ಯಂ

ಚಲನಚಿತ್ರ: ಮುದ್ದಿನ ಮಾವ  


ದೀಪಾವಳಿ ದೀಪಾವಳಿ,ಗೋವಿಂದ ಲೀಲಾವಳಿ

ಅಳಿಯ ಮಗನಾದನು,ಮಾವ ಮಗುವಾದನು{೨}

 

ಏ ತಾನತಂದಾನ ತಂದಾನತಾನ ತಾನತಂದಾನ ನಾ

ತಾನತಂದಾನ ತಂದಾನತಾನ ತಾನತಂದಾನ ನಾ

 

ಹೆತ್ತೋರ ಆಸೆಯ ಮನ್ನಣೆ ಮಾಡಿ, ಕೊಟ್ಟೋರ ಹೆಣ್ಣನು ಮುದ್ದಾಗಿ ನೋಡಿ

ಇದ್ದಾಗ ಹೋಳಿಗೆ ತಿನ್ನುತ ಹಾಡಿ, ಕಣ್ಣಲ್ಲಿ ಕಂಬನಿ ಮುತ್ತಾಗಿ ಮಾಡಿ

 

ಸಲಹೋ ಅಳಿಮಯ್ಯ ರಾಮನಿಗು ಮೇಲು, ಪ್ರೀತಿ ಕೊಟ್ಟೋನಿಗೆ ಕಟ್ಟಬೇಕು ಕಾಲು

ಚಂದನ ಮೆತ್ತಿ ಮಲ್ಲಿಗೆ ಸುತ್ತಿ, ಮನೆ ಮಗನಿಗೆ ಆರತಿ ಎತ್ತಿ

ಬಾಳು ಬನವಾಯಿತು, ಇರುಳು ಬೆಳಕಾಯಿತು

 

ದೀಪಾವಳಿ ದೀಪಾವಳಿ, ಗೋವಿಂದ ಲೀಲಾವಳಿ

ಅಳಿಯ ಮಗನಾದನು, ಮಾವ ಮಗುವಾದನು

 

ಏ ತಾನತಂದಾನ ತಂದಾನತಾನ ತಾನತಂದಾನ ನಾ

ಓ ತಾನತಂದಾನ ತಂದಾನತಾನ ತಾನತಂದಾನ ನಾ{೨}

 

ಮಾವಯ್ಯ ನೀನೆಂದೂ ನಮಗೆ ಜೀವ,ಮನದ ತುಂಬ ನಿನ್ನ ಬಳ್ಳಿಯದೆ ಹೂವ

ಅಪ್ಪಯ್ಯ ನಾ ನಿನ್ನ ಋಣದ ಮೇಲೆ, ಮನಸೆ ಹೂವ ಮಾಡಿ ಹಾಕುವೆನು ಮಾಲೆ

 

ನೆನಕೆ ಹರಕೆಯೆಲ್ಲ ದೇವರಿಗೆ ಹೇಳಿ, ನಗುತ ಹೀಗೇ ನೀವು ನೂರು ಕಾಲ ಬಾಳಿ

ಹಬ್ಬದ ದೀಪ, ಗಂಧದ ಧೂಪ, ಮನೆ ಹಿರಿಯರೆ ದೇವರ ರೂಪ

ಬಾಳು ಬನವಾಯಿತು, ಇರುಳು ಬೆಳಕಾಯಿತು

 

ದೀಪಾವಳಿ ದೀಪಾವಳಿ, ಗೋವಿಂದ ಲೀಲಾವಳಿ

ಅಳಿಯ ಮಗನಾದನು, ಮಾವ ಮಗುವಾದನು

 

ಏ ತಾನತಂದಾನ ತಂದಾನತಾನ ತಾನತಂದಾನ ನಾ

ಓ ತಾನತಂದಾನ ತಂದಾನತಾನ ತಾನತಂದಾನ ನಾ{೨}

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)