Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)


ಹಾಡು: ಜೇನಿನ ಹೊಳೆಯೋ

ರಚನೆ: ಚಿ. ಉದಯಶಂಕರ್

ಸಂಗೀತ: ರಾಜನ್‌ ನಾಗೇಂದ್ರ

ಗಾಯನ: ಡಾ. ರಾಜ್‌ಕುಮಾರ್‌

ಚಲನಚಿತ್ರ: ಚಲಿಸುವ ಮೋಡಗಳು  

 

ಜೇನಿನ ಹೊಳೆಯೋ, ಹಾಲಿನ ಮಳೆಯೋ

ಸುಧೆಯೋ ಕನ್ನಡ ಸವಿನುಡಿಯು{೨}

ವಾಣಿಯ ವೀಣೆಯ ಸ್ವರಮಾಧುರ್ಯವೋ

ಸುಮಧುರ ಸುಂದರ ನುಡಿಯು, ಆಹಾ

 

ಜೇನಿನ ಹೊಳೆಯೋ, ಹಾಲಿನ ಮಳೆಯೋ

ಸುಧೆಯೋ ಕನ್ನಡ ಸವಿನುಡಿಯು

 

ಕವಿನುಡಿ ಕೋಗಿಲೆ ಹಾಡಿದ ಹಾಗೆ

ದ ಪ ದ... ರಿ ಸ ರಿ…. ದ ಪಪ ದ ಸ ರಿ ದ ಸ

ಸವಿನುಡಿ ತಣ್ಣನೆ ಗಾಳಿಯ ಹಾಗೆ

 

ಕವಿನುಡಿ ಕೋಗಿಲೆ ಹಾಡಿದ ಹಾಗೆ, ಸವಿನುಡಿ ತಣ್ಣನೆ ಗಾಳಿಯ ಹಾಗೆ

ಒಲವಿನ ಮಾತುಗಳಾಡುತಲಿರಲು, ಮಲ್ಲಿಗೆ ಹೂಗಳು ಅರಳಿದ ಹಾಗೆ

 

ಮಕ್ಕಳು ನುಡಿದರೆ ಸಕ್ಕರೆಯಂತೆ, ಅಕ್ಕರೆ ನುಡಿಗಳು ಮುತ್ತುಗಳಂತೆ

ಪ್ರೀತಿಯ, ನೀತಿಯ ಮಾತುಗಳೆಲ್ಲ ಸುಮಧುರ ಸುಂದರ ನುಡಿಯು

 

ಜೇನಿನ ಹೊಳೆಯೋ, ಹಾಲಿನ ಮಳೆಯೋ

ಸುಧೆಯೋ ಕನ್ನಡ ಸವಿನುಡಿಯು

 

ಆ ಹಾ ಹಾ ಹಾ ಹಾ….ಆ ಹಾಹಾಹಾ

ಆ ಹಾಹಾಹಾ... ಆ ಹಾ ಹಾ, ಅಆಅಆ

 

ಕುಮಾರವ್ಯಾಸನ ಕಾವ್ಯದ ಚಂದ, ಕವಿ ಸರ್ವಜ್ಞನ ಪದಗಳ ಅಂದ (೨)

ದಾಸರು ಶರಣರು ನಾಡಿಗೆ ನೀಡಿದ ಭಕ್ತಿಯ ಗೀತೆಗಳ ಪರಮಾನಂದ

 

ರನ್ನನು ರಚಿಸಿದ ಹೊನ್ನಿನ ನುಡಿಯು, ಪಂಪನು ಹಾಡಿದ ಚಿನ್ನದ ನುಡಿಯು

ಕನ್ನಡ ತಾಯಿಯು, ನೀಡಿದ ವರವು, ಸುಮಧುರ ಸುಂದರ ನುಡಿಯು, ಆಹಾ

 

ಜೇನಿನ ಹೊಳೆಯೋ, ಹಾಲಿನ ಮಳೆಯೋ

ಸುಧೆಯೋ ಕನ್ನಡ ಸವಿನುಡಿಯು

ಆಹಾ! ವಾಣಿಯ ವೀಣೆಯ ಸ್ವರಮಾಧುರ್ಯವೋ

ಸುಮಧುರ ಸುಂದರ ನುಡಿಯು, ಆಹಾ

 

ಜೇನಿನ ಹೊಳೆಯೋ, ಹಾಲಿನ ಮಳೆಯೋ

ಸುಧೆಯೋ ಕನ್ನಡ ಸವಿನುಡಿಯು(೨)

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)