Song: Kannadave nammamma (ಕನ್ನಡವೇ ನಮ್ಮಮ್ಮ), Movie: Mojugaara Sogasugaara (ಮೋಜುಗಾರ ಸೊಗಸುಗಾರ)

ಹಾಡು: ಕನ್ನಡವೇ ನಮ್ಮಮ್ಮ

ರಚನೆ: ಹಂಸಲೇಖ

ಸಂಗೀತ: ಹಂಸಲೇಖ

ಗಾಯನ: ಡಾ.ವಿಷ್ಣುವರ್ಧನ್‌

ಚಲನಚಿತ್ರ: ಮೋಜುಗಾರ ಸೊಗಸುಗಾರ

 

ಕನ್ನಡದ ಸಿದ್ದ, ಹಾಡೋದಕ್ಕೆ ಎದ್ದ

ಕನ್ನಡಕ್ಕೆ ಇವನು ಸಾಯೋದಕ್ಕು ಸಿದ್ಧ 

 

ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ

ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು

ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ

ನಲಿದಾಡೋ ನೀರಿವಳು, ನಾ ಉಸಿರಾಡೋ ಕಾಡಿವಳು

 

ಬರೆಯೋರ ತವರೂರು, ಕಡೆಯೋರ ಹಿರಿಯೂರು

ನಟಿಸೋರ ನವಿಲೂರು, ನುಡಿಸೋರ ಮೈಸೂರು

 

ಕೂಡಿದರೆ ಕಾಣುವುದು, ಎದೆ ತುಂಬ ಹಾಡಾಗುವುದು

ಮಧುರ ಮಧುರ ಇದು ಅಮರ ಅಮರ ಇದು

 

ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ

ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು

 

ಈ ಭಾಷೆ ಕಲಿಯೋದು, ಅಹ! ಬೆಣ್ಣೆನ ತಿಂದಂತೆ

ನಮ್ಮ ಭಾಷೆ ಬರೆಯೋಕೆ, ಹಾ! ಕಲಿಸೋರೆ ಬೇಡಂತೆ

 

ಹಾಡಿದರೆ, ತಿಳಿಯುವುದು, ಮೈತುಂಬಾ ಓಡಾಡುವುದು

ಸರಳ ಸರಳ ಇದು ವಿರಳ ವಿರಳ ಇದು

 

ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ

ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು

 

ಅಭಿಮಾನ ಹಾಲಂತೆ (ಹಾಲಂತೆ), ದುರಭಿಮಾನ ವಿಷವಂತೆ

ಸಹಿಸೋರು ನಾವಂತೆ(ನಾವಂತೆ), ನಿರಭಿಮಾನ ಬೇಡಂತೆ

 

ಕನ್ನಡತಿ ಆಜ್ನೆ ಇದು, ಅವಳೆದೆಯಾ, ಹಾಡು ಇದು

ಅವಳ ಬಯಕೆ ಇದು ನಮಗೆ ಹರಕೆ ಇದು

ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ

ಮಾತಾಡೋ ದೇವರಿವಳು, ನಮ್ಮ ಕಾಪಾಡೋ ಗುರು ಇವಳು

 

ಕನ್ನಡವೇ ನಮ್ಮಮ್ಮ, ಅವಳಿಗೆ ಕೈ ಮುಗಿಯಮ್ಮ

ನಲಿದಾಡೋ ನೀರಿವಳು, ನಾ ಉಸಿರಾಡೋ ಕಾಡಿವಳು

 

ಸಿದ್ಧವೋ ಸಿದ್ಧವೋ, ಕನ್ನಡಕ್ಕೆ ಸಾಯಲು

ಸಿದ್ಧವೋ ಬದ್ಧವೋ, ಕನ್ನಡಕ್ಕೆ ಬಾಳಲು

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)