Song: Karunaada thaayi (ಕರುನಾಡ ತಾಯಿ), Movie: Naanu nanna hendthi (ನಾನು ನನ್ನ ಹೆಂಡ್ತಿ)

ಹಾಡು: ಕರುನಾಡ ತಾಯಿ

ರಚನೆ: ಹಂಸಲೇಖ

ಸಂಗೀತ: ಶಂಕರ್-ಗಣೇಶ್‌

ಗಾಯನ: ಎಸ್.‌ ಪಿ. ಬಾಲಸುಬ್ರಹ್ಮಣ್ಯಂ

ಚಲನಚಿತ್ರ: ನಾನು ನನ್ನ ಹೆಂಡ್ತಿ

 

ಲ ಲಾಲ ಲಾಲ ... ಲ ಲಾ ಲಾ ಲ ಲಾ

 

ಕರುನಾಡ ತಾಯಿ ಸದಾ ಚಿನ್ಮಯಿ(೨)

ಈ ಪುಣ್ಯ ಭೂಮಿ, ನಮ್ಮ ದೇವಾಲಯ

ಪ್ರೇಮಾಲಯ ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ(೨)

 

ವೀರ ಧೀರರಾಳಿದ ನಾಡು ನಿನ್ನದು

ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು

ವರ ಸಾಧು ಸಂತರ ನೆಲೆ ನಿನ್ನದು

ಮಹಾ ಶಿಲ್ಪಕಾರರ ಕಲೆ ನಿನ್ನದು

ಸಂಗೀತ, ಸಾಹಿತ್ಯ ಸೆಲೆ ನಿನ್ನದು

 

ಕರುನಾಡ ತಾಯಿ ಸದಾ ಚಿನ್ಮಯಿ(೨)

ಈ ಪುಣ್ಯ ಭೂಮಿ, ನಮ್ಮ ದೇವಾಲಯ

ಪ್ರೇಮಾಲಯ ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ(೨)

 

ಜೀವ ತಂತಿ ಮೀಟುವ ಸ್ನೇಹ ನಮ್ಮದು

ಎಲ್ಲ ಒಂದೇ ಎನ್ನುವ ಔದಾರ್ಯ ನಮ್ಮದು

ಸೌಂದರ್ಯ ಸೀಮೆಯ ಗುಡಿ ನಮ್ಮದು

ಮಾಧುರ್ಯ ತುಂಬಿದ ನುಡಿ ನಮ್ಮದು

ಕಸ್ತೂರಿ ಕನ್ನಡದ ಸವಿ ನಮ್ಮದು

 

ರೋಮ ರೋಮಗಳು ನಿಂತವು ತಾಯೆ

ಚೆಲುವ ಕನ್ನಡದೊಳೇನಿದು ಮಾಯೆ

ಮುಗಿಲೇ ಕಡಲೆ ಸಿಡಿಲೆ ಕೇಳಿರಿ(೨)

ತನುವು ಮನವು ಧನವು ಎಲ್ಲ ಕನ್ನಡ(೨)

ಆಅಅಆ... ಆಅಆಆಆ

 

ಕರುನಾಡ ತಾಯಿ ಸದಾ ಚಿನ್ಮಯಿ(೨)

ಈ ಪುಣ್ಯ ಭೂಮಿ ನಮ್ಮ ದೇವಾಲಯ

ಪ್ರೇಮಾಲಯ ಈ ದೇವಾಲಯ

ಕರುನಾಡ ತಾಯಿ ಸದಾ ಚಿನ್ಮಯಿ(೨)

 

 

 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)