Song: Jothe jotheyali title track {ನೂರು ಜನ್ಮ(ಜೊತೆಜೊತೆಯಲಿ)}, Serial: Jothe jotheyali (ಜೊತೆಜೊತೆಯಲಿ‌)

‌ಹಾಡು: ನೂರು ಜನ್ಮ(ಜೊತೆಜೊತೆಯಲಿ)

ರಚನೆ:‌ ಹರ್ಷ ಪ್ರಿಯ

ಸಂಗೀತ‌: ಸುನಾದ್‌ ಗೌತಮ್

ಗಾಯನ: ನಿನಾದ ನಾಯಕ್‌ , ನಿಹಾಲ್ ತೌರೋ, ರಜತ್‌ ಹೆಗ್ಡೆ

ಧಾರಾವಾಹಿ :‌ ‌ಜೊತೆಜೊತೆಯಲಿ‌

 

ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು

ಎಲ್ಲ ಎಲ್ಲೆ ಮೀರಿದಾಗಲು ಪಯಣ ನಿಲ್ಲದು

ಜರಿವ ಜನರೆದುರಿನಲ್ಲೆ ನಿನ್ನ ನೆರಳಾಗಿ ನಿಲ್ಲುವೆ

ಜಗದ ಕೊನೆ ತಿರುವವರೆಗು ಬೆರಳ ನಾ ಹಿಡಿದು ನಡೆಯುವೆ

 

ಅತಿಯಾದರೂ ಹಿತವಾಗಿದೆ ನಿನ್ನ ನೆನಪಾ ಮಂಪರು

ನನ್ನ ಬಾಳಿಗೆ ವರವಾಗಿದೆ ನಿನ್ನ ಪ್ರೀತಿಯ ತುಂತುರು

 

ಇತಿಹಾಸ ಹಿಂದೆಂದೂ ಕಾಣದ ಹೊಸ ಪ್ರೇಮ ಭಾಷ್ಯ ಬರೆವಾ

ಪ್ರತಿ ಪ್ರೇಮಿಗಳಿಗು ಗುರಿ ತೋರುವ ದಾರೀಲಿ ನಾವು ನಡೆವಾ

 

ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು

ಎಲ್ಲ ಎಲ್ಲೆ ಮೀರಿದಾಗಲು ಪಯಣ ನಿಲ್ಲದು

 

ಗರಿಬಿಚ್ಚಿದ ನವಿಲಾಗುವೆ ನೀ ಬಂದರೆ ಎದುರಿಗೆ

ಗಡಿಪಾರಿನ ಸಜೆ ನೀಡುವೆ ನೀ ಇಲ್ಲದ ಕನಸಿಗೆ

 

ಎದೆಯೊಳಗೆ ನಿನ್ನನ್ನು ಮಲಗಿಸಿ ಲಾಲೀನ ಹಾಡುತಿರುವೆ

ಎದೆಬಡಿತ ನಿದಿರೆಯನು ತಡೆದರೆ ಉಸಿರಾಟವನ್ನೆ ಬಿಡುವೆ

 

ನೂರು ಜನ್ಮ ಕೂಡಿ ಬಾಳುವ ಜೋಡಿ ನಮ್ಮದು

ಎಲ್ಲ ಎಲ್ಲೆ ಮೀರಿದಾಗಲು ಪಯಣ ನಿಲ್ಲದು

ಜರಿವ ಜನರೆದುರಿನಲ್ಲೆ ನಿನ್ನ ನೆರಳಾಗಿ ನಿಲ್ಲುವೆ

ಜಗದ ಕೊನೆ ತಿರುವವರೆಗು ಬೆರಳ ನಾ ಹಿಡಿದು ನಡೆಯುವೆ

 

ಎಂದೂ ನಾನಿರುವೆ, ಜೊತೆಜೊತೆಯಲಿ, ಜೊತೆಜೊತೆಯಲಿ

ಎಂದೂ ಎಂದೆಂದೂ, ಜೊತೆಜೊತೆಯಲಿ, ಜೊತೆಜೊತೆಯಲಿ


ಜೊತೆ ಜೊತೆಯಲಿ- ವಂಶಿ ಚಿತ್ರದ ಹಾಡಿಗಾಗಿ ಕೆಳಗಿನ ಲಿಂಕನ್ನು ಕಾಪಿ-ಪೇಸ್ಟ್‌ ಮಾಡಿ https://kannadamoviesongslyricsinkannada.blogspot.com/2019/12/song-jothe-jotheyali-movie-vamshi.html

ಗೀತಾ ಚಿತ್ರದ ಜೊತೆಯಲಿ ಜೊತೆಜೊತೆಯಲಿ ಹಾಡಿಗಾಗಿ ಕೆಳಗಿನ ಲಿಂಕನ್ನು ಕಾಪಿ-ಪೇಸ್ಟ್‌ ಮಾಡಿ

https://kannadamoviesongslyricsinkannada.blogspot.com/2019/12/jothe-jotheyali-movie-geetha.html




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)