Song: Kannalli yeno minchondu kandithalla (ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ), Movie: Vasantha geetha (‌ವಸಂತ ಗೀತ)

‌ಹಾಡು: ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ

ರಚನೆ:‌ ಚಿ. ಉದಯಶಂಕರ್

ಸಂಗೀತ‌: ಎಂ. ರಂಗರಾವ್

ಗಾಯನ: ಡಾ. ರಾಜಕುಮಾರ್ 

ಚಲನಚಿತ್ರ:‌ ‌ವಸಂತ ಗೀತ

 

ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ

ನಿನ್ನಾಸೆ ಏನೋ ನಾನಿಂದು ಕಾಣೆನಲ್ಲ

ಕೋಪವೋ?! ತಾಪವೋ?!

ಕೋಪವೋ, ತಾಪವೋ, ನಡುಗಿದೆ ತುಟಿ ಏತಕೆ…

ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ

 

ಒಳ್ಳೆ ವಯಸ್ಸು, ಒಳ್ಳೆ ಸೊಗಸು, ಏಕೆ ಹೀಗಾಯ್ತು ಮನಸು

ಕಣ್ಣು ಚನ್ನ, ಬಣ್ಣ ಚನ್ನ, ನಾ ಕಾಣೆ ಹೀಗೇಕೆ ಮುನಿಸು, ಹೋ

ಒಳ್ಳೆ ವಯಸ್ಸು, ಒಳ್ಳೆ ಸೊಗಸು, ಏಕೆ ಹೀಗಾಯ್ತು ಮನಸು

ಕಣ್ಣು ಚನ್ನ, ಬಣ್ಣ ಚನ್ನ, ನಾ ಕಾಣೆ ಹೀಗೇಕೆ ಮುನಿಸು

 

ಈ ರೋಷವೋ, ಆವೇಷವೋ, ಈ ದ್ವೇಷವೋ, ಆಕ್ರೋಷವೋ

ಚಲುವೆಯೆ ನಿನಗೇತಕೆ…..ಎಏ ಎಏ ಏಏ?

 

ಕಣ್ಣಲ್ಲಿ ಏನೋ ಮಿಂಚೊಂದು ಕಂಡಿತಲ್ಲ

ನಿನ್ನಾಸೆ ಏನೋ ನಾನಿಂದು ಕಾಣೆನಲ್ಲ

 

ಚಲುವೆ ಮೊಗದಿ, ಗೆಲುವ ಕಂಡೆ, ಎಲ್ಲಿ ಏನಾಯ್ತೋ ಕಾಣೆ

ಗೆಲುವ ಹಿಂದೆ, ಛಲವ ಕಂಡೆ, ಅಮ್ಮಮ್ಮ ನೀನೆಂಥ ಜಾಣೆ...ಹೇ ಏ

ಚಲುವೆ ಮೊಗದಿ, ಗೆಲುವ ಕಂಡೆ, ಎಲ್ಲಿ ಏನಾಯ್ತೋ ಕಾಣೆ

ಗೆಲುವ ಹಿಂದೆ, ಛಲವ ಕಂಡೆ, ಅಮ್ಮಮ್ಮ ನೀನೆಂಥ ಜಾಣೆ

 

ನಿನ್ನಾಸೆಯ ನಾ ಬಲ್ಲೆನು, ಇನ್ನಾರನೂ ನಾ ಒಲ್ಲೆನು

ಸರಸಕೆ ಬರಲಾರೆಯಾ? ಹೇಳು...ಬರಲಾರೆಯಾ?

 

ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ

ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೇ

 

ಬಳಿಗೆ ಬರುವ, ಮನವ ಗೆಲ್ಲುವ ಆಸೆ ನನ್ನಲ್ಲಿ ಬಂತೇ

ಸರಸದಿಂದ ನಿನ್ನ ಬೆರೆವೆ, ಬಾ ಹೇಳು ಇನ್ನೇಕೆ ಚಿಂತೆ...ಹೇ ಏ

ಬಳಿಗೆ ಬರುವ, ಮನವ ಗೆಲ್ಲುವ ಆಸೆ ನನ್ನಲ್ಲಿ ಬಂತೇ

ಸರಸದಿಂದ ನಿನ್ನ ಬೆರೆವೆ, ಬಾ ಹೇಳು ಇನ್ನೇಕೆ ಚಿಂತೆ

 

ನಿನಗಾಗಿಯೇ ನಾನಿಲ್ಲವೇ, ನನ್ನಾಸೆಯು ನಿನಗಿಲ್ಲವೇ?

ನಿಜವನು ನುಡಿ ಸುಂದರಿ..

ನಿನ್ನಂಥ ನೂರು ಹೆಣ್ಣನ್ನು ನಾನು ಬಲ್ಲೆ

ನನ್ನಲ್ಲಿ ಇನ್ನು ನಿನ್ನಾಟ ಸಾಗದಲ್ಲೇ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)