Song: Hrudayake hedarike (ಹೃದಯಕೆ ಹೆದರಿಕೆ), Movie: Thaayige takka maga (ತಾಯಿಗೆ ತಕ್ಕ ಮಗ)

ಹಾಡು: ಹೃದಯಕೆ ಹೆದರಿಕೆ

ರಚನೆ:‌ ಜಯಂತ್‌ ಕಾಯ್ಕಿಣಿ

ಸಂಗೀತ‌: ಜುಡಾ ಸ್ಯಾಂಡಿ

ಗಾಯನ: ಸಂಗೀತ ರವೀಂದ್ರನಾಥ್‌, ಸಂಜಿತ್‌ ಹೆಗ್ಡೆ

ಚಲನಚಿತ್ರ:‌ ‌ತಾಯಿಗೆ ತಕ್ಕ ಮಗ

 

ಹೃದಯಕೆ, ಹೆದರಿಕೆ, ಹೀಗೆ ನೋಡಿದರೆ

ಹುಡುಕುತಾ, ಬರುವೆಯಾ? ಹೇಳದೆ, ಹೋದರೆ

 

ಎದೆಯಲ್ಲಿ, ಬಿರುಗಾಳಿ, ಮೊದಲೇನೇ ಇತ್ತು

ನೀ ನನಗೆ, ಏನೆಂದು, ನನಗಷ್ಟೇ ಗೊತ್ತು  

 

ಹೃದಯಕೆ, ಹೆದರಿಕೆ, ಹೀಗೆ ನೋಡಿದರೆ

ಹುಡುಕುತಾ, ಬರುವೆಯಾ? ಹೇಳದೆ, ಹೋದರೆ

 

ಓ ಮರವೇ, ನಿನ್ನಾ ತಬ್ಬಿ, ಹಬ್ಬುತಿರೋ ಬಳ್ಳಿ ನಾನು

ಮೆಲ್ಲಗೆ ವಿಚಾರಿಸು, ನನ್ನ

ಮೈಮರೆತು ನಿನ್ನಾ ಮುಂದೆ ವರ್ತಿಸುವ ಮಳ್ಳಿ ನಾನು

ಕೋಪವ ನಿವಾಳಿಸು ಚಿನ್ನ

 

ನೀ ನನಗೆ ದೊರೆತಂಥ ಸಿಹಿಯಾದ ಮತ್ತು

ನಿನಗಾಗೋ ಕನಸೆಲ್ಲಾ ನನಗಷ್ಟೇ ಗೊತ್ತು

 

ಮುಚ್ಚಿರುವ, ಕಣ್ಣಿನಲ್ಲೂ, ಮೂಡಿರುವ ಬಣ್ಣ ನೀನು

ಮುತ್ತಿಡು ಮಾತಾಡುವ ಮುನ್ನ

 

ಹಾ...ನೆನೆ ನೆನೆದು ತುಂಬ ಸೊರಗಿ, ಆಗಿರುವೆ ಸಣ್ಣ ನಾನು

ಹಿಡಿಸುವೆನು ಹೃದಯದಲ್ಲಿ ನಿನ್ನ

 

ನಾ ನಿನ್ನ ಬಿಗಿದಪ್ಪಿ ಇರುವಂಥ ಹೊತ್ತು

ಜಗವೆಲ್ಲಾ ಮರೆಯಾಯ್ತು ನನಗಷ್ಟೇ ಗೊತ್ತು

 

ಹೃದಯಕೆ, ಹೆದರಿಕೆ, ಹೀಗೆ ನೋಡಿದರೆ

ಹುಡುಕುತಾ ಬರುವೆಯಾ? ಹೇಳದೆ, ಹೋದರೆ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)