Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

‌ಹಾಡು: ನೀ ಅಮೃತಧಾರೆ

ರಚನೆ:‌ ನಾಗತಿಹಳ್ಳಿ ಚಂದ್ರಶೇಖರ್

ಸಂಗೀತ‌: ಮನೋಮೂರ್ತಿ

ಗಾಯನ: ಹರೀಶ್‌ ರಾಘವೇಂದ್ರ, ಸುಪ್ರಿಯಾ ಆಚಾರ್ಯ

ಚಲನಚಿತ್ರ:‌ ‌ಅಮೃತಧಾರೆ

 

ನೀ, ಅಮೃತಧಾರೆ, ಕೋಟಿ ಜನುಮ ಜತೆಗಾತಿ

ನೀ, ಅಮೃತಧಾರೆ, ಇಹಕೂ ಪರಕೂ ಸಂಗಾತಿ

ನೀ, ಇಲ್ಲವಾದರೆ ನಾ ಹೇಗೆ ಬಾಳಲಿ

 

ಹೇ, ಪ್ರೀತಿ ಹುಡುಗ, ಕೋಟಿ ಜನುಮ ಜತೆಗಾರ 

ಹೇ, ಪ್ರೀತಿ ಹುಡುಗ, ನನ್ನ ಬಾಳ ಕಥೆಗಾರ

ನೀ, ಇಲ್ಲವಾದರೆ ನಾ ಹೇಗೆ ಬಾಳಲಿ

ಹೇ, ಪ್ರೀತಿ ಹುಡುಗ

 

ನೆನಪಿದೆಯೆ ಮೊದಲ ನೋಟ, ನೆನಪಿದೆಯೆ ಮೊದಲ ಸ್ಪರ್ಶ?

ನೆನಪಿದೆಯೆ ಮತ್ತನು ತಂದ, ಆ ಮೊದಲ ಚುಂಬನ?

 

ನೆನಪಿದೆಯೆ ಮೊದಲ ಕನಸು, ನೆನಪಿದೆಯೆ ಮೊದಲ ಮುನಿಸು?

ನೆನಪಿದೆಯೆ ಕಂಬನಿ ತುಂಬಿ, ನೀನಿತ್ತ ಸಾಂತ್ವನ?

ನೀ, ಇಲ್ಲವಾದರೆ ನಾ ಹೇಗೆ ಬಾಳಲಿ

 

ನೀ, ಅಮೃತಧಾರೆ, ಕೋಟಿ ಜನುಮ ಜತೆಗಾತಿ

ನೀ, ಅಮೃತಧಾರೆ, ಇಹಕೂ ಪರಕೂ ಸಂಗಾತಿ

ನೀ, ಅಮೃತಧಾರೆ

 

ನೆನಪಿದೆಯೆ ಮೊದಲ ಸರಸ, ನೆನಪಿದೆಯೆ ಮೊದಲ ವಿರಸ

ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ?

 

ನೆನಪಿದೆಯೆ ಮೊದಲ ಕವನ, ನೆನಪಿದೆಯೆ ಮೊದಲ ಪಯಣ

ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ?

ನೀ, ಇಲ್ಲವಾದರೆ ನಾ ಹೇಗೆ ಬಾಳಲಿ

 

ಹೇ, ಪ್ರೀತಿ ಹುಡುಗ, ಕೋಟಿ ಜನುಮ ಜತೆಗಾರ

ನೀ, ಅಮೃತಧಾರೆ, ಇಹಕೂ ಪರಕೂ ಸಂಗಾತಿ

ನೀ, ಇಲ್ಲವಾದರೆ ನಾ ಹೇಗೆ ಬಾಳಲಿ

ನೀ, ಅಮೃತಧಾರೆ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)