Song: Soul of Dia (ಸೋಲ್‌ ಆಫ್‌ ದಿಯಾ), Movie: Dia (ದಿಯಾ)

ಹಾಡು: ಸೋಲ್‌ ಆಫ್‌ ದಿಯಾ

ರಚನೆ: ಧನಂಜಯ್‌ ರಂಜನ್

ಸಂಗೀತ: ಬಿ. ಅಜನೀಶ್‌ ಲೋಕನಾಥ್

ಗಾಯನ: ಸಂಜಿತ್‌ ಹೆಗ್ಡೆ, ಚಿನ್ಮಯಿ ಶ್ರೀಪಾದ

ಚಲನಚಿತ್ರ: ದಿಯಾ

 

ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ

ಮಾಯಾದಾ ಮಾಯಾದಾ, ಕನಸಿನಲ್ಲಿ ನಾ ನಿನ್ನ ಸೇರಲೇ

 

ಕೈ ಜಾರೋ ಸಂಜೆಯ, ಕೈ ಬೀಸಿ ಕರೆದೆಯಾ

ನೂರಾರು ಕಲ್ಪನೆ ಮೆಲ್ಲನೆ ಬಂದು ಮರೆಯಾಗಿದೆ

ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ

 

ಹೂವಂತೆ ನಗಲು ಪ್ರೀತಿ, ಕೈ ಚಾಚಿ ಕರೆದ ರೀತಿ

ಅದು ವಿರಳ, ತುಂಬ ಸರಳ, ನದಿ ತುಂಬೋ ರೀತಿ ಕಡಲ

 

ನಾನು ಈಗ ಬೇಕಂತಲೇ ನಗಿಸೋಕೆ ಬಂದೆ ಶಾಕುಂತಲೆ

ನಿನ್ನ ಮೋಹಿಸುವಂತಲೇ ನೂರಾರು ಕನಸು ಹೂ ಅಂತಲೇ

ಇದುವೇ ನಮಗೆ ಹೊಸ ಬದುಕಿದು

 

ಬಾ ನನ್ನ ಬಾ ನನ್ನ, ಬಂದು ಕೇಳು ಒಮ್ಮೆ ನನ್ನ ಕಂಪನ  

ನಾ ನಿನ್ನ ನಾ ನಿನ್ನ, ಕೂಡಿ ಬಾಳಬೇಕು ಎಂಬ ಆಸೆನ

 

ತಾನಾಗೇ ಹುಟ್ಟೊ ಪ್ರೀತಿ, ನಮ್ಮ ನೆನಪೇ ನಮಗೆ ಸ್ಫೂರ್ತಿ

ಅದು ಬಹಳ ಅಂತರಾಳ, ಇದು ತಿಳಿಸೋ ರೀತಿ ಬಹಳ

 

ಒಮ್ಮೆ ಬಿಟ್ಟು ಸ್ಪಂದಿಸೋ, ಸರಿಯಾದ ಸಮಯಕೆ ಸೇರಿಸೋ

ಒಮ್ಮೆ ಕೈಯನು ಹಿಡಿದರೆ, ಅದೆ ತಾನೆ ಪ್ರೀತಿಯ ಆಸರೆ 

ಇದುವೆ ನಮಗೆ ಹೊಸ ಬೆಸುಗೆಯ

 

ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ

ಮಾಯಾದಾ ಮಾಯಾದಾ, ಕನಸಿನಲ್ಲಿ ನಾ ನಿನ್ನ ಸೇರಲೇ

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)