Song: Hindustanavu yendu mareyada(ಹಿಂದೂಸ್ತಾನವು ಎಂದೂ ಮರೆಯದ), Movie: Amrutha ghalige ( ಅಮೃತಘಳಿಗೆ)

ಹಾಡು: ಹಿಂದೂಸ್ತಾನವು ಎಂದೂ ಮರೆಯದ

ರಚನೆ: ವಿಜಯನಾರಸಿಂಹ

ಸಂಗೀತ: ವಿಜಯ ಭಾಸ್ಕರ್

ಗಾಯನ: ಪಿ. ಜಯಚಂದ್ರನ್‌

ಚಲನಚಿತ್ರ: ಅಮೃತಘಳಿಗೆ

ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ(೨)

ಈ ಕನ್ನಡ ಮಾತೆಯ ಮಡಿಲಲ್ಲಿ

ಈ ಕನ್ನಡ ನುಡಿಯ ಗುಡಿಯಲ್ಲಿ 

ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ


ದೇಶಭಕ್ತಿಯ ಬಿಸಿ ಬಿಸಿ ನೆತ್ತರು ಧಮನಿ ಧಮನಿಯಲಿ ತುಂಬಿರಲಿ(೨)

ವಿಶ್ವಪ್ರೇಮದ, ಶಾಂತಿಮಂತ್ರದ ಘೋಷವ ಎಲ್ಲೆಡೆ ಮೊಳಗಿಸಲಿ

ಸಕಲ ಧರ್ಮದ ಸತ್ವ ಸಮನ್ವಯ ಸತ್ವ ಜ್ಯೋತಿಯ ಬೆಳಗಿಸಲಿ


ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ


ಕನ್ನಡ ತಾಯಿಯ ಕೋಮಲ ಹೃದಯದ ಭವ್ಯ ಶಾಸನ ಬರೆಯಿಸಲಿ(೨)

ಕನ್ನಡ ನಾಡಿನ ಎದೆಎದೆಯಲ್ಲು ಕನ್ನಡ ವಾಣಿಯ ಸ್ಥಾಪಿಸಲಿ

ಈ ಮಣ್ಣಿನ ಪುಣ್ಯದ ದಿವ್ಯ ಚರಿತ್ರೆಯ ಕಲ್ಲು ಕಲ್ಲಿನಲು ಕೆತ್ತಿಸಲಿ


ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ

ಈ ಕನ್ನಡ ಮಾತೆಯ ಮಡಿಲಲ್ಲಿ

ಈ ಕನ್ನಡ ನುಡಿಯ ಗುಡಿಯಲ್ಲಿ 

ಹಿಂದೂಸ್ತಾನವು ಎಂದೂ ಮರೆಯದ ಭಾರತ ರತ್ನವು ಜನ್ಮಿಸಲಿ


ಲಾ ಲಲ ಲಾ ಲಲ ಲಾ ಲಲಲ(೨)





  

 



 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)