Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

ಹಾಡು: ಈ ಹಸಿರು ಸಿರಿಯಲಿ

ಸಾಹಿತ್ಯ: ಗೋಪಾಲ್‌ ಯಾಗ್ನಿಕ್‌

ಸಂಗೀತ: ಸಿ.ಅಶ್ವಥ್

ಗಾಯನ: ಸಂಗೀತ ಕಟ್ಟಿ

ಚಲನಚಿತ್ರ: ನಾಗಮಂಡಲ


ಈ ಹಸಿರು ಸಿರಿಯಲಿ ಮನಸು ಮೆರೆಯಲಿ ನವಿಲೇ

ನಿನ್ನಾಂಗೆಯೆ ಕುಣಿವೆ, ನಿನ್ನಂತೆಯೆ ನಲಿವೆ

ನವಿಲೇ, ನವಿಲೆ

ಈ ನೆಲದ ನೆಲೆಯಲಿ ಕನಸು ಸುರಿಯಲಿ, ನವಿಲೇ.

ನೀನೇನೆ ನಾನಾಗುವೆ, ಗೆಲುವಾಗಿಯೆ ಒಲಿವೆ

ನವಿಲೇ, ನವಿಲೆ


ತಂಗಾಳಿ ಬೀಸಿ ಬರದೆ, ಸೌಗಂಧಾ ಸುಖವ ತರದೇ

ಚಿಗುರೆಲೆಯು ಎಲ್ಲಿ ಮರವೆ, ನಿನ್ನ ಗೆಳತಿ ನಾನು ಮೊರೆವೆ{೨}


ಮತ್ಯಾಕೆ ಮೌನ ಗಿಳಿಯೇ, ಸಿಟ್ಯಾಕೆ ಎಂದು ತಿಳಿಯೆ

ಹೊತ್ಯಾಕೆ ಹೇಳು ಅಳಿಲೇ, ಗುಟ್ಯಾಕೆ ನನ್ನ ಬಳಿಯೆ

ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ, ತೊಳೆಯಲೇ


ಈ ಹಸಿರು ಸಿರಿಯಲಿ ಮನಸು ಮೆರೆಯಲಿ, ನವಿಲೇ

ನಿನ್ನಾಂಗೆಯೆ ಕುಣಿವೆ, ನಿನ್ನಂತೆಯೆ ನಲಿವೆ

ನವಿಲೇ, ನವಿಲೆ


ಏನಂಥಾ ಮುನಿಸು ಗಿರಿಯೆ, ಮಾತನ್ನ ಮರೆತೆ ಸರಿಯೇ

ಜೇನಂಥಾ ಪ್ರೀತಿ ಸುರಿದೇ, ನನ್ನ ಜೀವ ಜೀವ ನದಿಯೇ{೨}


ಸುರಲೋಕಾ ಇದನು ಬಿಡಲೇ, ತವರೀಗೆ ಸಾಟಿ ಇದೆಯೇ

ಚಿರಕಾಲ ಇಲ್ಲೆ ಇರಲೇ, ನಗುತಿರು ನೀಲಿ ಮುಗಿಲೇ

ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ, ಹರಸಿರೇ


ಈ ಹಸಿರು ಸಿರಿಯಲಿ ಮನಸು ಮೆರೆಯಲಿ, ನವಿಲೇ

ನಿನ್ನಾಂಗೆಯೆ ಕುಣಿವೆ, ನಿನ್ನಂತೆಯೆ ನಲಿವೆ

ನವಿಲೇ ನವಿಲೆ, ನವಿಲೇ ನವಿಲೆ, ನವಿಲೇ ನವಿಲೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Neenaade naa(ನೀನಾದೆ ನಾ), Movie: Yuvarathnaa (ಯುವರತ್ನ)

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Marali manasaagide(ಮರಳಿ ಮನಸಾಗಿದೆ), Movie: Gentleman(ಜೆಂಟಲ್ಮನ್‌)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Hesaru poorthi helade, Movie: Paramathma

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Soundarya samara (ಸೌಂದರ್ಯ ಸಮರ), Movie: Kaddipudi (ಕಡ್ಡಿಪುಡಿ)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)