Song: Ivalu yaaru balleyenu(ಇವಳು ಯಾರು ಬಲ್ಲೆ ಏನು), Movie: Gowri (ಗೌರಿ)

 
ಹಾಡು: ಇವಳು ಯಾರು ಬಲ್ಲೆ ಏನು
ರಚನೆ:‌ ಕೆ.ಎಸ್.‌ ನರಸಿಂಹಸ್ವಾಮಿ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಶ್ರೀನಿವಾಸ್‌
ಚಲನಚಿತ್ರ: ಗೌರಿ
 
ಇವಳು ಯಾರು ಬಲ್ಲೆ ಏನು?
ಇವಳ ಹೆಸರ ಹೇಳಲೇನು?
 
ಇವಳು ಯಾರು ಬಲ್ಲೆ ಏನು?(೨)
ಇವಳ ಹೆಸರ ಹೇಳಲೇನು?
ಇವಳ ದನಿಗೆ ತಿರುಗಲೇನು?
ಇವಳು ಏತಕೋ, ಬಂದು ನನ್ನ ಸೆಳೆದಳು
 
ಇವಳು ಯಾರು ಬಲ್ಲೆ ಏನು?
ಇವಳ ಹೆಸರ ಹೇಳಲೇನು?
ಇವಳ ದನಿಗೆ ತಿರುಗಲೇನು?
ಇವಳು ಏತಕೋ, ಬಂದು ನನ್ನ ಸೆಳೆದಳು
 
ಅಡಿಯ ಮುಟ್ಟ ನೀಳ ಜಡೆ
ಅಡಿಯ ಮುಟ್ಟ ನೀಳ ಜಡೆ
ಮುಡಿಯ ತುಂಬ ಹೂವು ಹೆಡೆ
 
ಇವಳು ಅಡಿಯನಿಟ್ಟ ಕಡೆ, ಹೆಜ್ಜೆ ಹೆಜ್ಜೆಗೆ
ಇವಳು ಅಡಿಯನಿಟ್ಟ ಕಡೆ, ಹೆಜ್ಜೆ ಹೆಜ್ಜೆಗೆ
ಒಂದು ದೊಡ್ಡ ಮಲ್ಲಿಗೆ
 
ಇವಳು ಯಾರು ಬಲ್ಲೆ ಏನು?
ಇವಳ ಹೆಸರ ಹೇಳಲೇನು?
ಇವಳ ದನಿಗೆ ತಿರುಗಲೇನು?
ಇವಳು ಏತಕೋ, ಬಂದು ನನ್ನ ಸೆಳೆದಳು
 
ಅಂಗಾಲಿನ ಸಂಜೆಗೆಂಪು
ಕಾಲಂದುಗೆ ಗೆಜ್ಜೆ ಇಂಪು
 
ಮೋಹದ ಮಲ್ಲಿಗೆಯ ಕಂಪು
ಕರೆದುದೆನ್ನನು, ಆ..ಓ..
 
ಮೋಹದ ಮಲ್ಲಿಗೆಯ ಕಂಪು
ಕರೆದುದೆನ್ನನು, ನಾನು ಹಿಡಿಯ ಹೋದೆನು
ನಾನು ಹಿಡಿಯ ಹೋದೆನು
 
ಬಂಗಾರದ ಬೆಳಕಿನೊಳಗೆ, ಮುಂಗಾರಿನ ಮಿಂಚು ಬೆಳಗೆ
ಇಳೆಗಿಳಿದಿಹ ಮೋಡದೊಳಗೆ
ಮೆರೆಯುತಿದ್ದಳು, ನನ್ನ ಕರೆಯುತಿದ್ದಳು
 
ಇವಳು ಯಾರು ಬಲ್ಲೆ ಏನು?
ಇವಳ ಹೆಸರ ಹೇಳಲೇನು?
ಇವಳ ದನಿಗೆ ತಿರುಗಲೇನು?
ಇವಳು ಏತಕೋ, ಬಂದು ನನ್ನ ಸೆಳೆದಳು
 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Prema chandrama (ಪ್ರೇಮ ಚಂದ್ರಮ), Movie: Yajamana (ಯಜಮಾನ)