Song: Naa ninage kaavalugaara (ನಾ ನಿನಗೆ ಕಾವಲುಗಾರ), Movie: James (ಜೇಮ್ಸ್)

ಹಾಡು: ನಾ ನಿನಗೆ ಕಾವಲುಗಾರ

ರಚನೆ: ಚೇತನ್‌ ಕುಮಾರ್

ಸಂಗೀತ:‌ ಚರಣ್‌ ರಾಜ್‌

ಗಾಯನ:‌ ಸಂಜಿತ್‌ ಹೆಗ್ಡೆ, ಅಂಕಿತ ಕುಂಡು

ಚಲನಚಿತ್ರ: ಜೇಮ್ಸ್


ಈ ಕಣ್ಣಿನ ಜಲಪಾತದ ಮೇಲೆ ನಿಂತು

ಹಾಡುತಿದೆ ಈ ಹೃದಯ ಜೋಕಾಲಿ

ಅತಿ ಸುಂದರ ಅತಿ ಮೌನದ ಸೆಳೆತಕೆ ಸೋತು

ಹಿಂಬಾಲಿಸಿದೆ ಹರೆಯ ಖಾಲಿಗೈಯ್ಯಲಿ


ನಿನ್ನ ಸಂಗ, ಅತಿರೋಚಕ

ಪ್ರತಿಗನಸಾ, ನೀ ಮಾಲೀಕ

ಸಿಕ್ಕಿಹುದು ನನಗೀಗ ಪಾರಿತೋಷಕ

ಅಭಿಮಾನಿ ನಾ ನಿನಗೆ ವಿದೂಷಕ


ನಾ ನಿನಗೆ, ಕಾವಲುಗಾರ

ಕಾಯುವೆನು, ಜನುಮ ಪೂರ{೨}


ಸಿಕ್ಕಿಹುದು ನನಗೀಗ ಪಾರಿತೋಷಕ

ಅಭಿಮಾನಿ ನಾ ನಿನಗೆ ವಿದೂಷಕ


ಇತಿಹಾಸದ ಪುಟದ ಒಳಗೆ ಇರಬಹುದು ಒಂದು ನಂಟು

ಪ್ರತಿಘಳಿಗೆಗೂ ಒಂದು ಚೂರು ಅಪ್ಪುಗೆಯ ಸೆಳೆತ ಉಂಟು


ಸಾಟಿ ಇಲ್ಲದ ನೋಟದ ಧಾಟಿ ನಿನ್ನದು

ಭೇಟಿಯಾಗಲು ಕಾಯುವ ಮನಸು ನನ್ನದು

ಬದಲಾಗಿದೆ ದಿನಚರಿ, ಬೇಕು ನಿನ್ನ ಹಾಜರಿ

ಈ ಹೃದಯಕೆ ನೀನೆಂದಿಗೂ ರಾಯಭಾರಿ


ಸಿಕ್ಕಂಗೆ ಆಗಿಹುದು ಪಾರಿತೋಷಕ

ಅಭಿಮಾನಿ ನಾ ನಿನಗೆ ವೀಕ್ಷಕ


ನೀ ನನಗೆ, ಕಾವಲುಗಾರ

ಚಿರಋಣಿಯು, ಜನುಮಾ ಪೂರಾ

ಬಿಟ್ಟಿರಲು, ಆಗದು ದೂರ

ತಿಳಿಸಿಕೊಡು, ಪ್ರೀತಿಯ ಸಾರ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)