Song: Salaam soldier(ಸಲಾಂ ಸೊಲ್ಜರ್), Movie: James (ಜೇಮ್ಸ್)

ಹಾಡು: ಸಲಾಂ ಸೊಲ್ಜರ್

ರಚನೆ: ಚೇತನ್‌ ಕುಮಾರ್

ಸಂಗೀತ: ಚರಣ್‌ ರಾಜ್

ಗಾಯನ:‌ ಸಂಜಿತ್‌ ಹೆಗ್ಡೆ, ಚರಣ್‌ ರಾಜ್

ಚಲನಚಿತ್ರ: ಜೇಮ್ಸ್


ರಣ ರಣ ರಣ ರಣಕಲಿಯೋ
ಯುದ್ಧ ಭೂಮಿಗೇನೆ ಇವ ಕಳೆಯೋ
ಧಗ ಧಗ ಧಗ ಧಗ ಉರಿಯೋ
ಸೂರ್ಯನ್ನೇ ಸುಡೊ ಉಸಿರೋ‌

ರಣ ರಣ ಕಲಿ ರಣ ಕಲಿಯೋ
ಇಡೀ ದೇಶವೇನೆ ನಿನ್ನ ಮನೆಯೋ
ಧಢ ಧಢ ಧಢ ಧಢ ನಡೆಯೋ
ನಿನ್ನ ತ್ಯಾಗಕ್ಕೆಂದೂ ನಾವು ಋಣಿಯೋ

ಆ ಸಿಡಿಲು ಮಳೆಯೇ ಬಂದರೂ
ಸಾಗರವೇ ಉಕ್ಕಿ ಹರಿದರೂ
ಎದುರಾಳಿ ಎದುರಿಗೆ ನಿಂತರೂ
ನೀ ಮುನ್ನುಗ್ಗಿ ದೇಶಾನ ಕಾಯುವೇ

ಜನಗಣಮನ ಎದೆಯಲಿದೆ ಒಹೋ
ಬಲಿದಾನಕೂನು ನೀನು ರೆಡಿ ಒಹೋ
ಮಣ್ಣು ಕೂಡ ನಿನ್ನ ನೆನೆಯುತಿದೆ ಓಹೋ
ಎಂದೆಂದೂ ನಿಂಗೆ ಜೈ ಹೋ…..ಜೈ ಹೋ ಓ

ಸಲಾಂ, ಸೋಲ್ಜರ್‌, ನೀನಿದ್ರೆ ಇಲ್ಲ ಡೇಂಜರ್‌
ಸಲಾಂ, ಸೋಲ್ಜರ್‌, ನೀ ದೇಶಕೇನೆ ಪವರ್‌
ಸಲಾಂ, ಸೋಲ್ಜರ್‌, ನಿನ್‌ ಹೆಸರಲಿಹುದು ಫಾಯರ್‌
ಸಲಾಂ, ಸೋಲ್ಜರ್‌, ಎಂದೆಂದೂ ನೀನೆ ಸೇವ್ಯರ್‌

ಗಟ್ಟಿ ಗುಂಡಿಗೆ, ಓ ಶಿಸ್ತು ನಡಿಗೆ
ದೇಶ ಕಾಯುವೆ ನೀ ಕೊನೆಯವರೆಗೆ
ನಿನ್ನ ನಡುಕ ಆ ವೈರಿ ಪಡೆಗೆ
ನಿನ್‌ ಎದೆಯಲ್ಲಿ ಭಯವಿಲ್ಲ ರಣರೋಚಕ

ನಿನ್ನ ನೆರಳೇ ಧೈರ್ಯ ನಮಗೆ, ಕೇಳೋ
ನಿನ್ನ ಹೆಸರೇ ಹೆಮ್ಮೆ ನಮಗೆ
ನಿನ್ನ ಸೇವೆ ಶ್ರೇಷ್ಠ ನಮಗೆ
ಗಡಿಯಲ್ಲಿ ಸಿಡಿದೇಳುವಾ ಸೈನಿಕ, ಹಾ!

ಓ ದಿನ ದಿನವೂ ಹೋರಾಟ, ಬಂದೂಕಿನ ಒಡನಾಟ
ಹೊಸ ಸಮರದ ಸೆಣಸಾಟ, ಓ ನೀನು ಧೈರ್ಯದ ಸಾಮ್ರಾಟ
ಹೆತ್ತವರ ಬಿಟ್ಟಿರುವೇ, ಬಯಕೆಗಳ ತೊರೆದಿರುವೇ
ಧೃಡವಾಗಿ ನಿಂತಿರುವೆ, ನೀ ದೇಶಕೆ ಮುಡಿಪಾಗೇ ಇರುವೇ

ಸೋಲ್ಜರ್, ಸೋಲ್ಜರ್‌, ಈ ಕೇಸರಿ ಬಿಳಿ ಹಸಿರು
ನಿನ್ನೆದೆಯ ಪ್ರತಿ ಉಸಿರು
ಅಜರಾಮರ ನಿನ್‌ ಹೆಸರು
ಹೇ ನಿನಗೆ ಸಾಟಿ ಯಾರೋ
ಯಾರೋ, ಯಾರೋ ಯಾರೋ

ದಿನ ದಿನ ದಿನ, ದುಡಿವೆ ನೀನು ಒಹೋ
ಕ್ಷಣ ಪ್ರತಿಕ್ಷಣ, ರಭಸದಲಿ ಒಹೋ
ಕಣಕಣದಲ್ಲೂ ದೇಶಪ್ರೇಮ ಒಹೋ
ಎಂದೆಂದೂ ನಿಂಗೆ ಜೈ ಹೋ…..ಜೈ ಹೋ ಓ

ಸಲಾಂ, ಸೋಲ್ಜರ್‌, ನೀನಿದ್ರೆ ಇಲ್ಲ ಡೇಂಜರ್‌
ಸಲಾಂ, ಸೋಲ್ಜರ್‌, ನೀ ದೇಶಕೇನೆ ಪವರ್‌
ಸಲಾಂ, ಸೋಲ್ಜರ್‌, ನಿನ್‌ ಹೆಸರಲಿಹುದು ಫಾಯರ್‌
ಸಲಾಂ, ಸೋಲ್ಜರ್‌, ಎಂದೆಂದೂ ನೀನೆ ಸೇವ್ಯರ್‌

ಇಸ್‌ ಮಿಟ್ಟಿ ಕೀ ಶಾನ್‌ ಹೋ ತುಮ್‌
ಓ ವೀರ್‌ ಸೇನಾ, ಭಾರತ್‌ ಮಾ ಕಿ ಶಾನ್‌ ಹೋ ತುಮ್‌
ಸಲಾಂ, ಸೋಲ್ಜರ್


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)