Song: Prayashaha (ಪ್ರಾಯಶಃ) Movie: Gaalipata 2 (ಗಾಳಿಪಟ- ೨)

ಹಾಡು: ಪ್ರಾಯಶಃ

ರಚನೆ: ಯೋಗರಾಜ್‌ ಭಟ್

ಸಂಗೀತ:ಅರ್ಜುನ್‌ ಜನ್ಯ

ಗಾಯನ:‌ ಸೋನು ನಿಗಂ

ಚಲನಚಿತ್ರ: ಗಾಳಿಪಟ- ೨ 


ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ

ಕನಸಿರಬಹುದಿದು ಪ್ರಾಯಶಃ, ಎಲ್ಲ

ಸರಿ ಇರಬಹುದು ಭಾಗಶಃ, ಇಲ್ಲ

ಸೆರೆ ಇರಬಹುದಿದು ಮೂಲತಃ,ಜೀವಾ, 

ವಿಲವಿಲ ಎನ್ನುತಲೇ ಒಲವನು ಹುಡುಕುತಿದೆ, 

ಪ್ರಾಯಶಃ 


ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ

ಕನಸಿರಬಹುದಿದು ಪ್ರಾಯಶಃ


ಕಂಗಳೇ ಇಲ್ಲದ ಊರಲಿ ನಡೆದು(೨)

ಕನ್ನಡಿ ಮಾರುವ ಕೆಲಸವ ಹಿಡಿದು

ನಮ್ಮನು ನಾವೇ….

ನಮ್ಮನು ನಾವೇ ಕಾಣದೆ ಹೋಗಿ, ಎಲ್ಲಿಗೋ ಸಾಗಿ


ನಾವು ಯಾರಿರಬಹುದೆಂದು, ಹುಡುಕಲು ಬಯಸುವೆವು ಪ್ರಾಯಶಃ 


ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ

ಕನಸಿರಬಹುದಿದು ಪ್ರಾಯಶಃ


ನಲಿವಿನ ಕ್ಷಣಗಳ ಕಾಯುತ ಕುಳಿತು(೨)

ದಿನಗಳ ಕಳೆವೆವು ನಗುವುದೇ ಮರೆತು

ನೆನ್ನೆಯ ಪಾಡು…

ನೆನ್ನೆಯ ಪಾಡು, ಈ ದಿನ ಕಾಡಿ, ನಾಳೆಯೂ ಬಾಡಿ


ನಮ್ಮ ಸಂಕಟವನೇ ನಾವು, ಸಂತಸ ಎನ್ನುವೆವು ಪ್ರಾಯಶಃ


ನಾವು ಬದುಕಿರಬಹುದು ಪ್ರಾಯಶಃ ,ಇಲ್ಲ

ಕನಸಿರಬಹುದಿದು ಪ್ರಾಯಶಃ

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)