Song: Nagabeda nagabeda ( ನಗಬೇಡ ನಗಬೇಡ) Movie: Badavara bandhu (ಬಡವರ ಬಂಧು)
ಹಾಡು: ನಗಬೇಡ ನಗಬೇಡ
ರಚನೆ: ಚಿ. ಉದಯಶಂಕರ್
ಸಂಗೀತ: ಎಂ.ರಂಗರಾವ್
ಗಾಯನ:ಪಿ. ಬಿ. ಶ್ರೀನಿವಾಸ್
ಚಲನಚಿತ್ರ: ಬಡವರ ಬಂಧು
ನಗಬೇಡ, ನಗಬೇಡ, ನಗಬೇಡ
ಅವನ ನೋಡುತಾ, ನೀನು ನಕ್ಕರೆ
ಊರೇ ನಗುವುದು, ನೀನು ಬಿದ್ದರೆ {೨}
ಅವನ ನೋಡುತಾ, ನೀನು ನಕ್ಕರೆ
ಊರೇ ನಗುವುದು, ನೀನು ಬಿದ್ದರೆ {೨}
ಒಂದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವುದೇ(೨)
ಇಂದೇ ಜನಿಸಿದ ಕಂದನು ನಡೆದು ಮಾತನಾಡುವುದೇ
ಇಂದೇ ಜನಿಸಿದ ಕಂದನು ನಡೆದು ಮಾತನಾಡುವುದೇ
ದಿನಗಳು ಕಳೆದಂತೆ, ಕಾಲವು ಬಂದಂತೆ(೨)
ಎಲ್ಲಾ ಬೆಳೆಯುವುದು, ಹೊಸತನ ಮೂಡುವುದು
ಎಲ್ಲಾ ಬೆಳೆಯುವುದು, ಹೊಸತನ ಮೂಡುವುದು
ನಗಬೇಡ, ನಗಬೇಡ, ನಗಬೇಡ
ಅವನ ನೋಡುತಾ, ನೀನು ನಕ್ಕರೆ
ಊರೇ ನಗುವುದು, ನೀನು ಬಿದ್ದರೆ
ಕಲಿಯುವುದಿನ್ನೂ ಸಾಗರದಂತಿದೆ ಕಲಿತವರಾರಿಲ್ಲಿ(೨)
ಶತಮಾನಗಳೇ ಕಲಿತರೂ ಮುಗಿಯದು ವಿದ್ಯೆಗೆ ವಯಸ್ಸೆಲ್ಲಿ
ಬಾಳಿನ ಅನುಕ್ಷಣವೂ, ಹೊಸ ಹೊಸ ಅನುಭವವು(೨)
ಪಾಠವ ಕಲಿಸುವುದು, ನೀತಿಯ ತಿಳಿಸುವುದು
ಪಾಠವ ಕಲಿಸುವುದು, ನೀತಿಯ ತಿಳಿಸುವುದು
ನಗಬೇಡ, ನಗಬೇಡ, ನಗಬೇಡ
ಅವನ ನೋಡುತಾ, ನೀನು ನಕ್ಕರೆ
ಊರೇ ನಗುವುದು, ನೀನು ಬಿದ್ದರೆ
ಮುಂದಕೆ ಬರುವರ ಕಂಡರೆ ಕರುಬುವ ಮನುಜರು ದಾನವರು (೨)
ಹೊಟ್ಟೆಯ ಕಿಚ್ಚಲಿ ತಾವೇ ಬೇಯುತ ನೋವಲಿ ನರಳುವರು
ಸ್ನೇಹದಿ ಬಾಳಿದರೆ, ಸಂಯಮ ತೋರಿದರೆ(೨)
ಶಾಂತಿಯ ನೀ ಪಡೆವೇ, ನೀನೂ ಸುಖ ಪಡೆವೆ
ನಗಬೇಡ, ನಗಬೇಡ, ನಗಬೇಡ
ಅವನ ನೋಡುತಾ, ನೀನು ನಕ್ಕರೆ
ಊರೇ ನಗುವುದು, ನೀನು ಬಿದ್ದರೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ