Song: Na naguva modalene(ನಾ ನಗುವ ಮೊದಲೇನೆ), Movie: Manasare(ಮನಸಾರೆ)

ಹಾಡು: ನಾ ನಗುವ ಮೊದಲೇನೆ
ರಚನೆ: ಯೋಗರಾಜ್‌ ಭಟ್
ಸಂಗೀತ: ಮನೋಮೂರ್ತಿ
ಗಾಯನ:‌ ಶ್ರೇಯ ಘೋಶಾಲ್
ಚಲನಚಿತ್ರ: ಮನಸಾರೆ
ನಾ, ನಗುವ ಮೊದಲೇನೆ
ಮಿನುಗುತಿದೆ ಯಾಕೊ ಹೊಸ ಮುಗುಳುನಗೆ
ನಾ, ನುಡಿವ ಮೊದಲೇನೆ
ತೊದಲುತಿದೆ ಹೃದಯವಿದು ಒಳಗೊಳಗೇ
ನಾ, ನಡೆವ ಮೊದಲೇನೆ
ಎಳೆಯುತಿದೆ ದಾರಿಯಿದು ನಿನ್ನೆಡೆಗೆ
ನಾ, ಅರಿವ ಮೊದಲೇನೆ
ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ

ನಾ, ನಗುವ ಮೊದಲೇನೆ
ಮಿನುಗುತಿದೆ ಯಾಕೊ ಹೊಸ ಮುಗುಳುನಗೆ

ತಿಳಿಸದೆ ನನಗೆ ಹುಡುಕಿದೆ ನಿನ್ನ, ನನ್ನಯ ಕಣ್ಣು
ಸಿಹಿ ಸಂಕಟ ಸಾಕಾಗಿದೆ, ಮುಂದೇನು
ಕಲಿತಿದೆ ಮನವು ಕುಣಿಯುವುದನ್ನು, ಕಂಡರೆ ನೀನು
ನಾನು ನನ್ನ ಪಾಡಿಗಿರಲು, ಯಾಕೆ ಕಂಡೆ ನೀ ನನಗೆ

ನಾ, ನಗುವ ಮೊದಲೇನೆ
ಮಿನುಗುತಿದೆ ಯಾಕೊ ಹೊಸ ಮುಗುಳುನಗೆ

ಕನವರಿಕೆಯಲಿ ನಿನ್ನಯ ಹೆಸರ ಕರೆಯಿತೆ ಹೃದಯ
ನನಗೇತಕೆ ನನ್ನ ಮೇಲೆಯೇ ಈ ಸಂಶಯ
ಬರಿ ಕನಸಿನಲೇ ಆಗುವೆ ಏಕೆ, ನನ್ನಯ ಇನಿಯ
ಹೇಳು ಒಮ್ಮೆ ಹೇಳು ಇದುವೇ ಪ್ರೀತಿ ಎಂದು ನೀ ನನಗೆ

ನಾ, ನಗುವ ಮೊದಲೇನೆ
ಮಿನುಗುತಿದೆ ಯಾಕೊ ಹೊಸ ಮುಗುಳುನಗೆ
ನಾ, ನುಡಿವ ಮೊದಲೇನೆ
ತೊದಲುತಿದೆ ಹೃದಯವಿದು ಒಳಗೊಳಗೇ
ನಾ, ನಡೆವ ಮೊದಲೇನೆ
ಎಳೆಯುತಿದೆ ದಾರಿಯಿದು ನಿನ್ನೆಡೆಗೆ
ನಾ, ಅರಿವ ಮೊದಲೇನೆ
ಉರಿಯುತಿದೆ ದೀಪವಿದು ನನ್ನೊಳಗೆ
ಒಂದು ಬಾರಿ ಹೇಳು ಮೆಲ್ಲಗೆ ಯಾರು ಯಾರು ನೀ ನನಗೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)