Song: Ello maleyagide endu (ಎಲ್ಲೋ ಮಳೆಯಾಗಿದೆ ಎಂದು), Movie: Manasaare (ಮನಸಾರೆ)

ಹಾಡು: ಎಲ್ಲೋ ಮಳೆಯಾಗಿದೆ ಎಂದು

ರಚನೆ: ಜಯಂತ್‌ ಕಾಯ್ಕಿಣಿ

ಸಂಗೀತ: ಮನೋಮೂರ್ತಿ

ಗಾಯನ: ಸೋನು ನಿಗಮ್‌

ಚಲನಚಿತ್ರ: ಮನಸಾರೆ


ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು, ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ, ಹೇಳಲು ಬರಬಹುದೇ
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ, ಬೀಳದೆ ಇರಬಹುದೇ

ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ

ಕಣ್ಣಲಿ ಮೂಡಿದೆ ಹನಿಗವನ, ಕಾಯಿಸಿ ನೀ ಕಾಡಿದರೆ
ನೂತನ ಭಾವದ ಆಗಮನ, ನೀ ಬಿಡದೇ ನೋಡಿದರೇ
ನಿನ್ನ ಧ್ಯಾನದಿ ನಿನ್ನದೆ ತೋಳಿನಲಿ, ಹೀಗೆಯೇ ಇರಬಹುದೇ
ಈ ಧ್ಯಾನವ ಕಂಡರೆ ದೇವರಿಗೂ, ಕೋಪವು ಬರಬಹುದೇ

ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು, ಕನಸೊಂದು ಬೀಳುತಿದೆ

ನೆನಪಿನ ಹೂಗಳ ಬೀಸಣಿಕೆ, ನೀ ಬರುವ ದಾರಿಯಲಿ
ಓಡಿದೆ ದೂರಕೆ ಬೇಸರಿಕೆ, ನೀನಿರುವಾ ಊರಿನಲೀ
ಅನುಮಾನವೇ ಇಲ್ಲದೆ ಕನಸಿನಲಿ, ಮೆಲ್ಲಗೆ ಬರಬಹುದೇ
ಅಲೆಮಾರಿಯ ಹೃದಯದ ಡೇರೆಯಲಿ, ನೀನು ಇರಬಹುದೇ

ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ
ಇಲ್ಲೇ ಒಲವಾಗಿದೆ ಎಂದು, ಕನಸೊಂದು ಬೀಳುತಿದೆ
ವ್ಯಾಮೋಹವ ಕೇವಲ ಮಾತಿನಲಿ, ಹೇಳಲು ಬರಬಹುದೇ
ನಿನ್ನ ನೋಡಿದ ಮೇಲೆಯೂ ಪ್ರೀತಿಯಲಿ, ಬೀಳದೆ ಇರಬಹುದೇ
ಎಲ್ಲೋ ಮಳೆಯಾಗಿದೆ ಎಂದು, ತಂಗಾಳಿಯು ಹೇಳುತಿದೆ




 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)