Song: Marete hodenu (ಮರೆತೇ ಹೋದೆನು), Movie: Dayavittu Gamanisi(ದಯವಿಟ್ಟು ಗಮನಿಸಿ)

ಹಾಡು: ಮರೆತೇ ಹೋದೆನು

ರಚನೆ: ಜಯಂತ್‌ ಕಾಯ್ಕಿಣಿ

ಸಂಗೀತ: ಅನೂಪ್‌ ಸೀಳಿನ್

ಗಾಯನ: ವಸಿಷ್ಠ ಸಿಂಹ

ಚಲನಚಿತ್ರ: ದಯವಿಟ್ಟು ಗಮನಿಸಿ

 

ಮರೆತೇ ಹೋದೆನು, ಹೊರಟ ಕಾರಣ

ನಿನ್ನಯ ಮಿಂಚಿನ ದಾಳಿಯಲಿ

ಕ್ಷಮಿಸು ನನ್ನನು, ತಪ್ಪು ನಿನ್ನದೇ

ಬಿದ್ದರೆ ನಿನ್ನದೇ ತೋಳಿನಲಿ

 

ಗಂಧದ ಹೂವಿಗೂ, ದೋಚುವ ಗಾಳಿಗೂ

ಎಂತಹ ಸುಂದರ ನೇಹಾ, ಆಹಾ!

 

ನಿನ್ನಯ ಕೈಯಲ್ಲಿ,ಪ್ರೀತಿಯ ಪುಸ್ತಕ

ಆಗುವ ಹಂಬಲ ನನಗೀಗ

ಹೇಳಲು ಬಾರದ, ಹೇಳಿಯೂ ತೀರದ

ತರಬೇತಿ ಇರದಂತಹ ದಾಹ, ಆಹಾ!

 

ಸನಿಹ ಬಂದರೂ, ಗೆರೆಯ ದಾಟದೆ

ದೂರವೇ ನಿಲ್ಲುವೆ ನಿರುಪಾಯ

ನಲ್ಮೆಯ ಜೀವವೇ, ನೆಮ್ಮದಿ ಕೋರುವೆ

ಎದೆಯಲ್ಲೇ ಬಚ್ಚಿಟ್ಟು ಗಾಯಾ, ಆಹಾ

 

ಮರತೇ ಹೋದೆನು ಹೊರಟ ಕಾರಣ

ನಿನ್ನಯ ಮಿಂಚಿನ ದಾಳಿಯಲಿ

ಕ್ಷಮಿಸು ನನ್ನನು, ತಪ್ಪು ನಿನ್ನದೇ

ಬಿದ್ದರೆ ನಿನ್ನದೇ ತೋಳಿನಲಿ

 

ಗಂಧದ ಹೂವಿಗೂ,ದೋಚುವ ಗಾಳಿಗೂ

ಎಂತಹ ಸುಂದರ ನೇಹಾ,ಆಹಾ!

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)