Song: Bhale bhale chendada (ಭಲೆ ಭಲೆ ಚಂದದ), Movie: Amruthavarshini (ಅಮೃತವರ್ಷಿಣಿ)

ಹಾಡು: ಭಲೆ ಭಲೆ ಚಂದದ

ರಚನೆ: ಕೆ. ಕಲ್ಯಾಣ್

ಸಂಗೀತ: ದೇವ

ಗಾಯನ: ಎಸ್.‌ ಪಿ. ಬಾಲಸುಬ್ರಹ್ಮಣ್ಯಂ

ಚಲನಚಿತ್ರ: ಅಮೃತವರ್ಷಿಣಿ

 

ಎಲ್ಲಾ ಶಿಲ್ಪಗಳಿಗೂ, ಒಂದೊಂದು ಹಿಂದಿನ ಕಥೆ ಇದೆ 

ನನ್ನ ಶಿಲ್ಪಚೆಲುವೆ, ಇವಳ ಮುಂದೆನ್ನ ಬದುಕಿದೆ

 

ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು{೨}

ನಿನ್ನ ಚಂದ ಹೊಗಳಲು, ಪದಪುಂಜ ಸಾಲದು

ನಿನ್ನ ಕಂಗಳ ಕಾಂತಿಗಳಿಂದನೇ ತಾನೇನೆ ಊರೆಲ್ಲ ಹೊಂಬೆಳಕು

ನೀನು ಹೆಜ್ಜೆಯ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು

 

ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

 

ತಂಪು ತಂಗಾಳಿಯು ತಂದಾನ ಹಾಡಿತ್ತು

ಕೇಳೋಕೆ ನಾ ಹೋದರೆ, ನಿನ್ನ ಈ, ಸರಿಗಮ ಕೇಳಿತು

ಸಮಸಮ ಹಂಚಿತು

 

ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತ್ತು  

ನೋಡೋಕೆ ನಾ ಬಂದರೆ, ನಿನ್ನದೇ ತಕಥೈ ಕಂಡಿತು

ತಕಧಿಮಿ ಹೆಚ್ಚಿತು

 

ಅಲ್ಲೊಂದು ಸುಂದರ ತೋಟವಿದೆ, ಅಲ್ಲಿ ನೂರಾರು ಹೂಗಳ ರಾಶಿ ಇದೆ

ಇಲ್ಲೊಂದು ಪ್ರೀತಿಯ ಹಾಡು ಇದೆ, ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ

ಎಲ್ಲ ಸಾಲಲ್ಲು ಇಣುಕೊ ಅಕ್ಷರ ನಿಂದೇನಾ?!

 

ಉತ್ತರ, ಇಲ್ಲದ, ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ 

 

ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

 

ಅತ್ತ ಕಾಳಿದಾಸ, ಇತ್ತ ರವಿವರ್ಮ ನಿನ್ನ ಹಿಂದೆ ಬಂದರೂ

ಅಂದವ, ಹೊಗಳಲು ಸಾಧ್ಯವೇ, ನಿನ್ನ ಮುಂದೆ ಮೌನವೇ

ಅತ್ತ ಊರ್ವಶಿಯು, ಇತ್ತ ಮೇನಕೆಯು, ನಿನ್ನ ನಡೆ ಕಂಡರೆ

ನಡುವೇ, ಉಳುಕುತ್ತೆ ಅಲ್ಲವೇ, ನಿನ್ನ ಬಿಟ್ಟರಿಲ್ಲವೇ

 

ಅಲ್ಲೊಂದು ರಾಜರ ಬೀದಿ ಇದೆ, ನೀನು ಅಲ್ಲಿಂದ ತೇರಲ್ಲಿ ಏರಿ ಬಂದೆ

ಇಲ್ಲೊಂದು ಹೃದಯ ಕೋಟೆ ಇದೆ, ಇಲ್ಲಿ ಎಂತೆಂಥ ಕನಸೊ ಕಾವಲಿದೆ

ಎಲ್ಲ ಕಾವಲು ದಾಟಿದ ಚೋರಿಯು ನೀನೇನಾ?!

 

ಹತ್ತಿರ ಇದ್ದರೂ, ಬಲು ಎತ್ತರ ಎತ್ತರ ನಿನ್ನಂದ ನಿನ್ನಂದವೆ

  

ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು

ನಿನ್ನ ಚಂದ ಹೊಗಳಲು, ಪದಪುಂಜ ಸಾಲದು

ನಿನ್ನ ಕಂಗಳ ಕಾಂತಿಗಳಿಂದನೇ ತಾನೇನೆ ಊರೆಲ್ಲ ಹೊಂಬೆಳಕು

ನೀನು ಹೆಜ್ಜೆಯ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು

  

ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು

ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Ninna Danigaagi (ನಿನ್ನ ದನಿಗಾಗಿ), Movie: Savaari 2 (ಸವಾರಿ 2)

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

Song: Ee hasiru siriyali (ಈ ಹಸಿರು ಸಿರಿಯಲಿ), Movie: Nagamandala (ನಾಗಮಂಡಲ)

Song: Ee nanna kannane (ಈ ನನ್ನ ಕಣ್ಣಾಣೆ), Movie: Abhi (ಅಭಿ)

Song: Nee Amruthadhare (ನೀ ಅಮೃತಧಾರೆ), Movie: Amruthadhare (ಅಮೃತಧಾರೆ)

Song: Jenina holeyo (ಜೇನಿನ ಹೊಳೆಯೋ), Movie: Chalisuva modagalu (ಚಲಿಸುವ ಮೋಡಗಳು)

Song: Neeralli sanna aleyondu (ನೀರಲ್ಲಿ ಸಣ್ಣ ಅಲೆಯೊಂದು). Movie: Hudugaru (ಹುಡುಗರು)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)