SONG:PARAVASHANADENU(ಪರವಶನಾದೆನು), MOVIE:PARAMATHMA(ಪರಮಾತ್ಮ)

ಚಿತ್ರ:ಪರಮಾತ್ಮ, 
ಹಾಡು:ಪರವಶನಾದೆನು, 
ಗಾಯಕ:ಸೋನು ನಿಗಮ್, 
ಸಾಹಿತ್ಯ:ಜಯಂತ್ ಕಾಯ್ಕಿಣಿ,
ಸಂಗೀತ:ವಿ.ಹರಿಕೃಷ್ಣ

ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ,
ಇದಕಿಂತ ಬೇಗ ಇನ್ನೂ, ಸಿಗಬಾರದಿತ್ತೆ ನೀನು,
ಇನ್ನಾದರೂ ಕೂಡಿಟ್ಟುಕೊ ನೀ ನನ್ನನೂ ಕಳೆಯುವ ಮುನ್ನವೇ,

ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ


ನಿನ್ನ ಕಣ್ಣಿಗಂತು ನಾನು, ನಿರುಪಯೋಗಿ ಈಗಲೂ,
ಇನ್ನು ಬೇರೆ ಏನು ಬೇಕು, ಪ್ರೇಮಯೋಗಿಯಾಗಲು,
ಹೂ ಅರಳುವ ಸದ್ದನು, ನಿನ್ನ ನಗೆಯಲಿ ಕೇಳಬಲ್ಲೆ,
ನನ್ನ ಏಕಾಂತವನ್ನು, ತಿದ್ದಿಕೊಡು ನೀನೀಗ  ನಿಂತಲ್ಲೆ,

ನಾನೇನೇ ಅಂದರೂನೂ, ನನಗಿಂತ ಚೂಟಿ ನೀನು,
ತುಟಿಯಲ್ಲಿಯೇ ಮುಚ್ಚಿಟ್ಟುಕೊ ಮುತ್ತೊಂದನೂ ಕದಿಯುವ ಮುನ್ನವೇ;


ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೆ ಪ್ರಣಯಕು ಮುನ್ನವೇ;


ಕನಸಲಿ ತುಂಬ ಕೆಟ್ಟಿರುವೆನು ನಿನ್ನನು ಕೇಳದೇ,
ರೆಕ್ಕೆಯ ನೀನೆ ಕಟ್ಟಿರಲು ಈ ಹೃದಯವು ಹಾರಿದೆ,
ನನ್ನಾ ಕೌತುಕ ಒಂದೊಂದೇ ಹೇಳಬೇಕು,
ಆಲಿಸುವಾಗ ನಂಬು ನನ್ನನ್ನೆ ಸಾಕು,

ಸಹವಾಸ ದೋಷದಿಂದ, ಸರಿಹೋಗಬಹುದೆ ನಾನು,
ನನಗಾಗಿಯೇ ಕಾದಿಟ್ಟುಕೊ ಹಟವೊಂದನೂ, ಕೆಣಕುವ ಮುನ್ನವೇ;


ಪರವಶನಾದೆನು, ಅರಿಯುವ ಮುನ್ನವೇ,
ಪರಿಚಿತನಾಗಲೀ ಹೇಗೇ ಪ್ರಣಯಕು ಮುನ್ನವೇ.


Which other kannada song lyrics do you want featured on this blog? Post in the comments  

ಕಾಮೆಂಟ್‌ಗಳು

  1. Paravashanadenu lyrics from Jayanth Kaykini, Great lyrics!
    Loved this video also, i planned to sing this song in my school gathering. Thanks!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Ello jinugiruva neeru (ಎಲ್ಲೋ ಜಿನುಗಿರುವ ನೀರು‌), Movie: Just maath maathalli(ಜಸ್ಟ್‌ ಮಾತ್‌ ಮಾತಲ್ಲಿ)

Song: Hesaru poorthi helade, Movie: Paramathma

Song: Maathu muride(ಮಾತು ಮುರಿದೆ‌), Movie: Ganda hendathi (ಗಂಡ-ಹೆಂಡತಿ)

Song: Dehavendare O manuja(ದೇಹವೆಂದರೆ ಓ ಮನುಜ), Movie: Janumada jodi ( ಜನುಮದ ಜೋಡಿ)

Song: Nodivalandava (ನೋಡಿವಳಂದವ), Movie: The Villain (ದಿ ವಿಲನ್)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)