MOVIE:GAANA BAJAANA, SONG: NAANU EEGA NAANENA

ಚಿತ್ರ:ಗಾನ ಬಜಾನ, ಹಾಡು:ನಾನು ಈಗ ನಾನೇನ, ಸಾಹಿತ್ಯ:ಕವಿರಾಜ್, ಸಂಗೀತ:ಜೋಶುವ ಶ್ರೀಧರ್ ಗಾಯಕ:ಕಾರ್ತಿಕ್.

ನಾನು ಈಗ ನಾನೇನ,ನನಗೆ ಏಕೋ  ಅನುಮಾನ,
ಕುಣಿಬೇಡ ಹೀಗೆ ಓ ಪ್ರಾಣ, ಇರು ಇರು ಜೋಪಾನ(2)

ಚೋರಿ ಚೋರಿ ಚುಪ್ ಚುಪ್ಕೆ, ಕನಸಲ್ಲಿ ಬಂದು ಕಾಡೋಳು,
ಇಂದು ಕಣ್ಮುಂದೆ ತಾನೇ ಬಂದು ನಿಂತಳು;
ಬಂದಳೀಗ ನನ್ನೊಳಗೆ ಎದೆ ಮೇಲೆ ಇಟ್ಟು ಅಂಗಾಲು,
ನುಂಗಿದಾ ಹಾಗೆ ಇರುಳನು ಬಂದು ಹಗಲು;

ನಾನು ಈಗ ನಾನೇನ, ನನಗೆ ಏಕೋ ಅನುಮಾನ,
ಕುಣಿಬೇಡ ಹೀಗೆ ಓ ಪ್ರಾಣ, ಇರು ಇರು ಜೋಪಾನ

ಅಪ್ಸರೆ, ಸಿರಿ ಅಪ್ಸರೆ, ಜೊತೆಯಾದರೆ ಬದುಕೆಂತ ಚನ್ನ,
ಆದರೆ,ಹಾಗಾದರೆ, ನನ್ನ ಬಾಳಿಗೆ ಬಳಿದಂತೆ ಬಣ್ಣ;
ದೇವರೇ, ಎದುರಾದರೆ, ವರ ಕೇಳಲು ಉಳಿದಿಲ್ಲ ಇನ್ನ,
ಈ ನಿನ್ನ ಅಂಗೈಲಿ ರೇಖೆಯಾಗಲು,
ಶುರುವಾಯ್ತು ಈಗ ನನಗಾಸೇ;

ಮೋಹಕ, ತುಸು ಮಾದಕ, ನಿನ ನಗುವಿಗೆ ಬೆರಗಾದೆ ನಾನು,
ರೋಚಕ,ರೋಮಾಂಚಕ, ಕುಡಿನೋಟಕೆ ಕೊಲೆಯಾದೆ ನಾನು,
ಸೇವಕ, ನಿನ ಸೇವಕ, ನಾನಾಗುವೆ ವಿಧಿಯಿಲ್ಲ ಇನ್ನು,
ಸೋಲಲ್ಲು ನಾ ಕಂಡೆ ಎಂತಹ ಸುಖ,
ಗೆಲುವೇಕೆ ಬೇಕು ನನಗಿನ್ನು;

ನಾನು ಈಗ ನಾನೇನ, ನನಗೆ ಏಕೋ ಅನುಮಾನ,
ಕುಣಿಬೇಡ ಹೀಗೆ ಓ ಪ್ರಾಣ, ಇರು ಇರು ಜೋಪಾನ,

ಚೋರಿ ಚೋರಿ ಚುಪ್ ಚುಪ್ಕೆ, ಕನಸಲ್ಲಿ ಬಂದು ಕಾಡೋಳು,
ಇಂದು ಕಣ್ಮುಂದೆ ತಾನೇ ಬಂದು ನಿಂತಳು;
ಬಂದಳೀಗ ನನ್ನೊಳಗೆ, ಎದೆ ಮೇಲೆ ಇಟ್ಟು ಅಂಗಾಲು,
ನುಂಗಿದ ಹಾಗೆ ಇರುಳನು ಬಂದು ಹಗಲೂ.


Any other kannada song lyrics that you would like to see here? Just ask for in the comments section below


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Song: Sada ninna kannali (ಸದಾ ನಿನ್ನ ಕಣ್ಣಲಿ), Movie: Bachchan (ಬಚ್ಚನ್-2013)

Song: Elliruve (ಎಲ್ಲಿರುವೆ), Movie: Bayaludaari (ಬಯಲುದಾರಿ)

Song: Preethi neenillade naanu hegirali (ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ), Movie: Bhaava baamaida (ಭಾವ ಬಾಮೈದ)

Song: Ninninda dooragi iralarenu (ನಿನ್ನಿಂದ ದೂರಾಗಿ ಇರಲಾರೆನು), Movie: Siddartha (ಸಿದ್ದಾರ್ಥ)

Song: Onde ondu Aaseyu (ಒಂದೇ ಒಂದು ಆಸೆಯು), Seetharamu (ಸೀತಾರಾಮು)

Song: Kangalu vandane helide (ಕಂಗಳು ವಂದನೆ ಹೇಳಿದೆ), Movie: Mugiyada kathe (‌ಮುಗುಯದ ಕಥೆ)

Song: Neenu neene illi naanu naane (ನೀನು ನೀನೇ ಇಲ್ಲಿ ನಾನು ನಾನೇ), Movie: Gadibidi ganda (ಗಡಿಬಿಡಿ ಗಂಡ)

Song: Jaaji mallige node (ಜಾಜಿ ಮಲ್ಲಿಗೆ ನೋಡೆ), Movie: Sevanthi sevanthi (ಸೇವಂತಿ ಸೇವಂತಿ)

Song: Kannige kaanuva(ಕಣ್ಣಿಗೆ ಕಾಣುವ ), Movie: Yarivanu(ಯಾರಿವನು)