ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

Ninnindale(ನಿನ್ನಿಂದಲೇ), Movie: Milana (ಮಿಲನ)

ಹಾಡು: ನಿನ್ನಿಂದಲೇ ರಚನೆ: ಜಯಂತ್‌ ಕಾಯ್ಕಿಣಿ ಸಂಗೀತ: ಮನೋಮೂರ್ತಿ ಗಾಯನ: ಸೋನು ನಿಗಮ್‌ ಚಲನಚಿತ್ರ: ಮಿಲನ ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ ನಿನ್ನಿಂದಲೇ, ನಿನ್ನಿಂದಲೇ, ಮನಸಿಂದು ಕುಣಿದಾಡಿದೆ ಈ ಎದೆಯಲ್ಲಿ ಸಿಹಿಯಾದ ಕೋಲಾಹಲ ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ ನಿನ್ನಿಂದಲೇ, ನಿನ್ನಿಂದಲೇ, ಮನಸಿಂದು ಕುಣಿದಾಡಿದೆ ಇರುಳಲ್ಲಿ ಜ್ವರದಂತೆ ಕಾಡಿ ಈಗ ಹಾಯಾಗಿ ನಿಂತಿರುವೆ ಸರಿಯೇನು ಬೇಕಂತಲೇ ಮಾಡಿ ಏನೋ ಮೋಡಿ ಇನ್ನೆಲ್ಲೊ ನೋಡುವ ಪರಿ ಏನು ಈ ಮಾಯೆಗೆ, ಈ ಮರುಳಿಗೆ, ನಿನ್ನಿಂದ ಕಳೆ ಬಂದಿದೆ ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ ಹೋದಲ್ಲಿ ಬಂದಲ್ಲಿ ಎಲ್ಲಾ ನಿನ್ನ ಸೊಂಪಾದ ಚಲುವಿನ ಗುಣಗಾನ ಕೇದಿಗೆ ಗರಿಯಂಥ ನಿನ್ನ ನೋಟ ನನಗೇನೋ ಅಂದಂತೆ ಅನುಮಾನ ಕಣ್ಣಿಂದಲೇ, ಸದ್ದಿಲ್ಲದೇ, ಮುದ್ದಾದ ಕರೆ ಬಂದಿದೆ ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ ಈ ಎದೆಯಲ್ಲಿ ಸಿಹಿಯಾದ ಕೋಲಾಹಲ ನನ್ನೆದುರಲ್ಲೇ ನೀ ಹೀಗೆ ಬಂದಾಗಲೇ ನಿನ್ನ ತುಟಿಯಲ್ಲಿ ನಗುವಾಗುವ ಹಂಬಲ ನಾ ನಿಂತಲ್ಲೇ ಹಾಳಾದೆ ನಿನ್ನಿಂದಲೇ ನಿನ್ನಿಂದಲೇ, ನಿನ್ನಿಂದಲೇ, ಕನಸೊಂದು ಶುರುವಾಗಿದೆ ನಿನ್ನಿಂದಲೇ, ನಿನ್ನಿಂದಲೇ, ಮನಸಿಂ...

nammoora mandaara hoove (ನಮ್ಮೂರ ಮಂದಾರ ಹೂವೆ), Movie: Aalemane( ಆಲೆಮನೆ-1981)

ಹಾಡು: ನಮ್ಮೂರ ಮಂದಾರ ಹೂವೆ ರಚನೆ: ದೊಡ್ಡರಂಗೇಗೌಡ ಸಂಗೀತ: ಅಶ್ವತ್ಥ್-‌ ವೈದಿ ಗಾಯನ: ಎಸ್.‌ ಪಿ. ಬಾಲಸುಬ್ರಮಣ್ಯಂ ಚಲನಚಿತ್ರ: ಆಲೆಮನೆ ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು {೨} ನಮ್ಮೂರ ಮಂದಾರ ಹೂವೇ ಕಣ್ಣಲ್ಲೆ ಕರೆದು , ಹೊಂಗನಸ ತೆರೆದು, ಸಂಗಾತಿ ಸಂಪ್ರೀತಿ ಸೆಳೆದೆ, ಅನುರಾಗ ಹೊಳೆದು, ಅನುಬಂಧ ಬೆಳೆದು, ಸಮ್ಮೋಹ ಸಂಬಂಧ ಮಿಡಿದೆ ಮೂಡಿದ, ಪ್ರೇಮದ, ಸೊಗಸಾದ ಕಾರಂಜಿ ಬಿರಿದೆ ಸೊಗಸಾದ ಕಾರಂಜಿ ಬಿರಿದೆ ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು ನಮ್ಮೂರ ಮಂದಾರ ಹೂವೆ ಒಡಲಾಳ ಮೊರೆದು, ಒಡನಾಟ ಮೆರೆದು, ಒಡನಾಡಿ ಬಾಂಧವ್ಯ ಕಂಡೆ ಋತುಮಾನ ಮೀರಿ, ಹೊಸಗಾನ ತೋರಿ, ಹಿತವಾದ ಮಾಧುರ್ಯ ಮಿಂದೆ  ತೀರದ, ಮೋಹದ, ಇನಿದಾದ ಆನಂದ ತಂದೆ,  ಇನಿದಾದ ಆನಂದ ತಂದೆ ನಮ್ಮೂರ ಮಂದಾರ ಹೂವೆ, ನನ್ನೊಲುಮೆ ಬಾಂದಳದ ಚಲುವೆ ಬಳಿಬಂದು ಬಾಳನ್ನು ಬೆಳಗು, ನನ್ನ ಬರಿದಾದ ಮನದಲ್ಲಿ ಮಿನುಗು, ಬರಿದಾದ ಮನದಲ್ಲಿ ಮಿನುಗು

Song: Aakasha deepavu neenu (ಆಕಾಶ ದೀಪವು ನೀನು), Movie: Pavana ganga (ಪಾವನ ಗಂಗಾ)

ಹಾಡು: ಆಕಾಶ ದೀಪವು ನೀನು  ರಚನೆ: ಚಿ. ಉದಯಶಂಕರ್‌ ಸಂಗೀತ: ರಾಜನ್-‌ ನಾಗೇಂದ್ರ ಗಾಯನ: ಎಸ್.‌ ಪಿ.ಬಾಲಸುಬ್ರಮಣ್ಯಂ ಚಲನಚಿತ್ರ: ಪಾವನ ಗಂಗಾ ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು(೨) ಆ ನೋಟದಲ್ಲೆ ಹಿತವೇನು, ಮರೆಯಾದಾಗ ನೋವೇನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು, ನಿನ್ನ ಕಂಡಾಗ ಸಂತೋಷವೇನು ಕಂಡಂದೆ ಕುಣಿಯಿತು ಮನವು, ಹೂವಾಗಿ ಅರಳಿತು ತನುವು(೨) ಹೃದಯದ, ವೀಣೆಯನು, ಹಿತವಾಗಿ ನುಡಿಸುತಲಿ  ಆನಂದ ತುಂಬಲು ನೀನು, ನಾ ನಲಿವೆನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು, ನಿನ್ನ ಕಂಡಾಗ ಸಂತೋಷವೇನು ಅನುರಾಗ ಮೂಡಿದ ಮೇಲೆ, ನೂರಾರು ಬಯಕೆಯ ಮಾಲೆ(೨) ಹೃದಯವು, ಧರಿಸಿದೆ, ಈ ಜೀವ ಸೋಲುತಿದೆ ಸಂಗಾತಿ ಆದರೆ ನೀನು, ನಾ ಉಳಿವೆನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು ಆ ನೋಟದಲ್ಲೆ ಹಿತವೇನು, ಮರೆಯಾದಾಗ ನೋವೇನು ಆಕಾಶ ದೀಪವು ನೀನು, ನಿನ್ನ ಕಂಡಾಗ ಸಂತೋಷವೇನು, ನಿನ್ನ ಕಂಡಾಗ ಸಂತೋಷವೇನು

Song: Hoovondu balibandu ( ಹೂವೊಂದು ಬಳಿಬಂದು), Movie: Shubhamangala(1975)

ಹಾಡು: ಹೂವೊಂದು ಬಳಿಬಂದು ರಚನೆ: ವಿಜಯನಾರಸಿಂಹ ಸಂಗೀತ: ವಿಜಯ ಭಾಸ್ಕರ್‌ ಗಾಯನ:ಆರ್.‌ ಎನ್.‌ ಸುದರ್ಶನ್‌‌ ಚಲನಚಿತ್ರ: ಶುಭಮಂಗಳ ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ{೨} ಕಾವೇರಿ ಸೀಮೆಯ ಕನ್ಯೆಯು ನಾನು ಬೇಲೂರು ಬಾಲೆಯ ಪ್ರತಿನಿಧಿ ನಾನು ತುಂಗೆಯ, ಭದ್ರೆಯ, ತುಂಗೆಯ ಭದ್ರೆಯ ತೌರಿನ ಹೂ ನಾನು, ತೌರಿನ ಹೂ ನಾನು ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ ಸೂರ್ಯನ ಕಾಂತಿಯ ಸುಂದರಿ ನಾನು ತಿಂಗಳ ಬೆಳಕಿನ ತಂಗಿಯು ನಾನು ಪ್ರೇಮದ, ಕಾವ್ಯಕೆ, ಪ್ರೇಮದ ಕಾವ್ಯಕೆ ಪೂಜೆಯ ಹೂ ನಾನು, ಪೂಜೆಯ ಹೂ ನಾನು ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ ಅರಿಶಿನ ಕುಂಕುಮ ಶೋಭಿತೆ ನಾನು ವಧುವಿನ ಶೃಂಗಾರ ಭೂಷಿತೆ ನಾನು ಮಂಗಳ, ಸೂತ್ರವ, ಮಂಗಳ ಸೂತ್ರವ ಬೇಡುವ ಹೂ ನಾನು, ಬೇಡುವ ಹೂ ನಾನು ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ ಹೂವೊಂದು, ಬಳಿಬಂದು, ತಾಕಿತು ಎನ್ನೆದೆಯ ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿನುಡಿಯ, ಜೇನಂಥ ಸಿಹಿನುಡಿಯ

Song: Naanavale nannavale (ನನ್ನವಳೇ ನನ್ನವಳೇ), Movie: Inspector Vikram (ಇನ್ಸ್ಪೆಕ್ಟರ್ ವಿಕ್ರಮ್‌‌)

ಹಾಡು: ನನ್ನವಳೇ ನನ್ನವಳೇ ರಚನೆ: ಧನಂಜಯ್‌ ರಂಜನ್‌ ಸಂಗೀತ: ಅನೂಪ್‌ ಸೀಳಿನ್‌ ಗಾಯನ: ಸೋನು ನಿಗಮ್‌ ಚಲನಚಿತ್ರ: ಇನ್ಸ್ಪೆಕ್ಟರ್ ವಿಕ್ರಮ್‌‌(2020) ನನ್ನವಳೇ ನನ್ನವಳೇ,ಪ್ರೀತಿಸು ಅಂದವಳೇ ಕೈ ತೊಳೆದು ಮುಟ್ಟುವಂಥ, ಸುಂದರಿ ನನ್ನವಳೇ ಬೇರೇನು ಬೇಕಿಲ್ಲ ನೀನೇ ವರ, ನೀನಂದ್ರೆ ಸಡಗರ ದೂರದಲ್ಲೇ ನಿಂತು ಕಂಪಿಸುವ, ಮಾತಲ್ಲೇ ಏಳು ಸ್ವರ ಆನಂದದ ಆಲಾಪನ, ಸನಿಹ ರೋಮಾಂಚನ ನನ್ನವಳೇ ನನ್ನವಳೇ,ಪ್ರೀತಿಸು ಅಂದವಳೇ ಕೈ ತೊಳೆದು ಮುಟ್ಟುವಂಥ, ಸುಂದರಿ ನನ್ನವಳೇ ತಂಗಾಳಿ ತಬ್ಬಲು ನಾನು, ತೆರೆದೆ ಕೈಯ್ಯನು  ಕಣ್ಬಿಟ್ಟು ನೋಡಿದರಿಲ್ಲಿ, ಕಂಡೆ ನಿನ್ನನು ತಿಂಗಳ ಬೆಳಕಿನಂತೆ ಹೊಳೆವ ಕಂಗಳು ಮುಗಿಲಿನಾಚೆ ನಿಂತೆ, ನಿನ್ನೆ ನೋಡಲು ನೀನು ನನ್ನ ಒಪ್ಪಲು, ಒಮ್ಮೆ ಮೆಲ್ಲ ತಬ್ಬಲು ಎಂಥ ಸಿಹಿ ಕಲ್ಪನೆ, ನಿನ್ನದೆ ಯೋಚನೆ ನಿನ್ನಿಂದಲೇ ಹೀಗಾದೆ ನಾ, ಸನಿಹ ರೋಮಾಂಚನ ನನ್ನವಳೇ ನನ್ನವಳೇ,ಪ್ರೀತಿಸು ಅಂದವಳೇ ಕೈ ತೊಳೆದು ಮುಟ್ಟುವಂಥ, ಸುಂದರಿ ನನ್ನವಳೇ ತಿರುಗಿ ನೋಡು ನೀನೊಮ್ಮೆ, ನನ್ನ ಸನ್ನೆಯ ನಿಂಗಾಗಿ ಕಟ್ಟುವೆ ನಾನು, ಹೊಸ ನಾಳೆಯ ಗುನುಗುತಿರುವೆ ನಾನು, ಸ್ವಲ್ಪ ಗಮನಿಸು ನನ್ನೆಲ್ಲ ಕನಸು ಈಗ ಒಂದುಗೂಡಿಸು ನನ್ನ ಹೊಸ ದಾರಿಯು, ನಿನ್ನ ಕೈ ರೇಖೆಯ ನೋಡು ಸ್ವಲ್ಪ ಬೇಗನೆ, ನಾನೇ ಬರುತಿರುವೆನೆ ಇಲ್ಲಿಂದಲೇ ಆಮಂತ್ರಣ, ಸನಿಹ ರೋಮಾಂಚನ ನನ್ನವಳೇ ನನ್ನವಳೇ,ಪ್...

Song: Enendu hesaridali(ಏನೆಂದು ಹೆಸರಿಡಲಿ), Movie: Anna bond (ಅಣ್ಣ ಬಾಂಡ್‌)

ಹಾಡು: ಏನೆಂದು ಹೆಸರಿಡಲಿ ರಚನೆ: ಜಯಂತ್‌ ಕಾಯ್ಕಿಣಿ ಸಂಗೀತ: ವಿ. ಹರಿಕೃಷ್ಣ ಗಾಯನ: ಸೋನು ನಿಗಮ್‌, ಶ್ರೇಯ ಘೋಶಾಲ್‌ ಚಲನಚಿತ್ರ: ಅಣ್ಣ ಬಾಂಡ್‌ ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಈ ಮೋಹದ, ರೂವಾರಿ ನೀನಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಜಾತ್ರೆಲೂ, ಸಂತೇಲೂ, ನೀ ಕೈಯ್ಯ ಬಿಡದಿರು ಆಗಾಗ ಕಣ್ಣಲ್ಲಿ, ಸಂದೇಶ ಕೊಡುತಿರು ಅದೇ ಪ್ರೀತಿ ಬೇರೆ ರೀತಿ, ಹೇಗಂತ ಹೇಳೋದು ಇಡೀ ರಾತ್ರಿ ಕಳೆದೆ ನಿನ್ನ ಬೆಳಕಿಗೆ ಕಾದು ಈ ಸ್ವಪ್ನದ, ಸಂಚಾರ ಸಾಕಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಓ, ಹೊತ್ತಿಲ್ಲ, ಗೊತ್ತಿಲ್ಲ, ಬೆನ್ನಲ್ಲೇ ಬರುವೆ ನಾ ನೀನಿಟ್ಟ ಮುತ್ತುಂಟು, ಇನ್ನೆಲ್ಲಿ ಬಡತನ ಗಸ್ತು ಹೊಡೆವ ಚಂದ್ರ ಬಂದ, ಕೇಳುತ್ತ ಮಾಮೂಲು ಕೊಟ್ಟು ಕಳಿಸೋಣ ಒಂದು ಕವಿತೆಯ ಸಾಲು ಓ, ನಿನ್ನಾಸೆಯು, ನಂದೂನು ಹೌದಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ ಏನೆಂದು ಹೆಸರಿಡಲಿ ಈ ಚಂದ ಅನುಭವಕೆ ಈಗಂತು ಹೃದಯದಲಿ ನಿಂದೇನೆ ಚಟುವಟಿಕೆ ಈ ಮೋಹದ, ರೂವಾರಿ ನೀನಲ್ಲವೇ ಇನ್ನೇತಕೆ ಬೇಜಾರು ನಾನಿಲ್ಲವೇ EnEndu hEsariDali ee chanda anuBhavakE Eegantu hruda...

Songe: Hoo malege (ಹೂ ಮಳೆಗೆ) Movie: Malgudi Days (ಮಾಲ್ಗುಡಿ ಡೇಸ್‌)

ಹಾಡು: ಹೂ ಮಳೆಗೆ ರಚನೆ: ಕಿಶೋರ್‌ ಮೂಡಬಿದರಿ ಸಂಗೀತ: ಗಗನ್‌ ಬಡೇರಿಯ ಗಾಯನ: ಸಿದ್ಧಾರ್ಥ ಬೆಳ್ಮಣ್ಣು. ಶೃತಿ ಶಶಿಧರನ್‌ ಚಲನಚಿತ್ರ: ಮಾಲ್ಗುಡಿ ಡೇಸ್‌ ಹೂ ಮಳೆಗೆ, ಮನಸು ಮಾಗಿದೆ ಈ ಧರೆಯ, ಚಲುವು ಮೀರಿದೆ ಈ ಸ್ನೇಹ, ಸಿಹಿಯಿದೆ ಮೌನದಲೂ ಮಾತಿದೆ ಮಳೆಹನಿ, ಚಿಟಪಟ, ಮುಗಿಲ ಸ್ನೇಹನಾದ ಮನಸನು, ಬೆಸೆಯುವ, ಮಳೆಯೇ ಒಂದು ವೇದ ಕೊನೆಯ ಜನುಮ, ಸಿಗುವ ಪುಣ್ಯ  ಒಲಿದ ಸ್ನೇಹ, ನಾನೇ ಧನ್ಯ ನೀನಾಡೊ ಮಾತೆಲ್ಲ, ಮಳೆಯಂತೆ ಜಿನುಗಿ ಮಧುವಾಗೆ ಮನದಲ್ಲಿ, ಹನಿಯಂತೆ ಮಿನುಗಿ ನನ್ನೆಲ್ಲ ಕ್ಷಣಗಳಿಗೆ, ನೀನಿನ್ನು ಗೆಳೆಯ ಕೊನೆವರೆಗು ಕಾಯುವೆನು ನಿನಗಾಗೆ ಹೃದಯ ಸುರಿಯೆ ನೀ ಮಳೆಯೆ, ಮನದ ತೆರೆಯ ಸರಿಯೇ ಧುಮುಕೇ ನೀ ಝರಿಯೇ, ಕೊಳಲ ನಾದ ಮರೆಯೇ ಬರೆದಂತಹ ಪದಗಳಲಿ, ನಿನ ಖುಷಿಗಳೆ ಮೊದಲು ಮಧುವಂತಹ ಈ ಸ್ನೇಹಕೆ, ಸರಿಗಮಗಳೆ ತೊದಲು ಹೂ ಮಳೆಗೆ, ಮನಸು ಮಾಗಿದೆ ಈ ಧರೆಯ, ಚಲುವು ಮೀರಿದೆ ಈ ಸ್ನೇಹ, ಸಿಹಿಯಿದೆ ಮೌನದಲೂ ಮಾತಿದೆ Hoo maLEgE, manasu maagidE ee dharEya, cheluvu meeridE ee snEha, sihiyidE Mounadalu maatidE maLEhani chiTapaTa, mugila snEhanaada Manasanu, bEsEyuva, maLEyE ondu vEda konEya januma siguva puNya olida sneha, naanE dhanya neenaaDO maatElla, maLEyante jinugi  Madhuvaag...