Song: Yajamana title song (ಯಜಮಾನ), Movie: Yajamana (ಯಜಮಾನ)
ಹಾಡು: ಯಜಮಾನ ರಚನೆ: ಸಂತೋಷ್ ಆನಂದ್‌ರಾಮ್ ಸಂಗೀತ: ವಿ. ಹರಿಕೃಷ್ಣ ಗಾಯನ: ವಿಜಯ್‌ಪ್ರಕಾಶ್ ಚಲನಚಿತ್ರ: ಯಜಮಾನ ಯಾರೇ ಬಂದರೂ, ಎದುರ್ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ ಜೀವ ಹೋದರೂ, ಜಗವೇನೇ ಅಂದರೂ ಮಾತು ತಪ್ಪದ ಯಜಮಾನ ಕೂಗಿ ಕೂಗಿ ಹೇಳುತೈತೆ ಇಂದು ಜ಼ಮಾನ ಸ್ವಾಭಿಮಾನ ನನ್ನ ಪ್ರಾಣ ಅನ್ನೋ ಪ್ರಯಾಣ ನಿಂತ ನೋಡೋ ಯಜಮಾನ(೨) ಯಾರೇ ಬಂದರೂ, ಎದುರ್ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ ಯಾರ್ ಹೆತ್ತ ಮಗನೋ! ನಮಗಾಗಿ ಬಂದನು ಮೇಲು ಕೀಳು ಗೊತ್ತೇ ಇಲ್ಲ, ಬಡವನೂ ಗೆಳೆಯಾನೇ ಶ್ರೀಮಂತಿಕೆ ತಲೆಗ್ ಹತ್ತೇ ಇಲ್ಲ ಹತ್ತೂರ ಒಡೆಯಾನೇ ನಿನ್ನ ಹೆಸರು, ನಿಂದೇ ಬೆವರು ತಾನು ಬೆಳೆದು ತನ್ನವರನ್ನು ಬೆಳೆಸೋ ಆ ಗುಣ ನೇರ ನುಡಿಗೆ ಸತ್ಯದೆಡೆಗೆ ಮಾಡಿದ ಪ್ರಮಾಣ ನಿಂತ ನೋಡೋ ಯಜಮಾನ(೨) ಯಾರೇ ಬಂದರೂ, ಎದುರ್ಯಾರೇ ನಿಂತರೂ ಪ್ರೀತಿ ಹಂಚುವ ಯಜಮಾನ ಬಿರುಗಾಳಿ ಎದುರು ನಗುವಂಥ ದೀಪ ನೋವನ್ನು ಮರೆಸೋ ಮಗುವಂಥ ರೂಪ ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ಸೋಲಿಗೂ ಸೋಲದ ಗೆದ್ದರೂ ಬೀಗದ ಒಬ್ಬನೆ ನಮ್ ಯಜಮಾನ ಪ್ರೀತಿಗೆ ಅತಿಥಿ, ಸ್ನೇಹಕೆ ಸಾರಥಿ ಬಾಳಿನಲ್ಲಿ ಎಂದಿಗೂ ನಿನ್ನ ಹೆಸರೇ ಸವಾಲು ಏಳು-ಬೀಳು ಆಟದಿ ನಿನ್ನ ನಡೆಯೇ ಕಮಾಲು ನಿಂತ ನೋಡೋ ಯಜಮಾನ(೨)