Song: Soul of Dia (ಸೋಲ್ ಆಫ್ ದಿಯಾ), Movie: Dia (ದಿಯಾ)
ಹಾಡು: ಸೋಲ್ ಆಫ್ ದಿಯಾ ರಚನೆ: ಧನಂಜಯ್ ರಂಜನ್ ಸಂಗೀತ: ಬಿ. ಅಜನೀಶ್ ಲೋಕನಾಥ್ ಗಾಯನ: ಸಂಜಿತ್ ಹೆಗ್ಡೆ, ಚಿನ್ಮಯಿ ಶ್ರೀಪಾದ ಚಲನಚಿತ್ರ: ದಿಯಾ   ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ ಮಾಯಾದಾ ಮಾಯಾದಾ, ಕನಸಿನಲ್ಲಿ ನಾ ನಿನ್ನ ಸೇರಲೇ   ಕೈ ಜಾರೋ ಸಂಜೆಯ, ಕೈ ಬೀಸಿ ಕರೆದೆಯಾ ನೂರಾರು ಕಲ್ಪನೆ ಮೆಲ್ಲನೆ ಬಂದು ಮರೆಯಾಗಿದೆ ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ   ಹೂವಂತೆ ನಗಲು ಪ್ರೀತಿ, ಕೈ ಚಾಚಿ ಕರೆದ ರೀತಿ ಅದು ವಿರಳ, ತುಂಬ ಸರಳ, ನದಿ ತುಂಬೋ ರೀತಿ ಕಡಲ   ನಾನು ಈಗ ಬೇಕಂತಲೇ ನಗಿಸೋಕೆ ಬಂದೆ ಶಾಕುಂತಲೆ ನಿನ್ನ ಮೋಹಿಸುವಂತಲೇ ನೂರಾರು ಕನಸು ಹೂ ಅಂತಲೇ ಇದುವೇ ನಮಗೆ ಹೊಸ ಬದುಕಿದು   ಬಾ ನನ್ನ ಬಾ ನನ್ನ, ಬಂದು ಕೇಳು ಒಮ್ಮೆ ನನ್ನ ಕಂಪನ   ನಾ ನಿನ್ನ ನಾ ನಿನ್ನ, ಕೂಡಿ ಬಾಳಬೇಕು ಎಂಬ ಆಸೆನ   ತಾನಾಗೇ ಹುಟ್ಟೊ ಪ್ರೀತಿ, ನಮ್ಮ ನೆನಪೇ ನಮಗೆ ಸ್ಫೂರ್ತಿ ಅದು ಬಹಳ ಅಂತರಾಳ, ಇದು ತಿಳಿಸೋ ರೀತಿ ಬಹಳ   ಒಮ್ಮೆ ಬಿಟ್ಟು ಸ್ಪಂದಿಸೋ, ಸರಿಯಾದ ಸಮಯಕೆ ಸೇರಿಸೋ ಒಮ್ಮೆ ಕೈಯನು ಹಿಡಿದರೆ, ಅದೆ ತಾನೆ ಪ್ರೀತಿಯ ಆಸರೆ  ಇದುವೆ ನಮಗೆ ಹೊಸ ಬೆಸುಗೆಯ   ಹಾಯಾದ ಹಾಯಾದ, ನನ್ನ ಪುಟ್ಟ ಲೋಕ ನೀನೇ ಅಲ್ಲವೇ ಮಾಯಾದಾ ಮಾಯಾದಾ, ಕನಸಿನಲ್ಲಿ ನಾ ನಿನ್ನ ಸೇರಲೇ