Song: Bhale bhale chendada (ಭಲೆ ಭಲೆ ಚಂದದ), Movie: Amruthavarshini (ಅಮೃತವರ್ಷಿಣಿ)
ಹಾಡು: ಭಲೆ ಭಲೆ ಚಂದದ ರಚನೆ: ಕೆ. ಕಲ್ಯಾಣ್ ಸಂಗೀತ: ದೇವ ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ ಚಲನಚಿತ್ರ: ಅಮೃತವರ್ಷಿಣಿ   ಎಲ್ಲಾ ಶಿಲ್ಪಗಳಿಗೂ, ಒಂದೊಂದು ಹಿಂದಿನ ಕಥೆ ಇದೆ  ನನ್ನ ಶಿಲ್ಪಚೆಲುವೆ, ಇವಳ ಮುಂದೆನ್ನ ಬದುಕಿದೆ   ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು{೨} ನಿನ್ನ ಚಂದ ಹೊಗಳಲು, ಪದಪುಂಜ ಸಾಲದು ನಿನ್ನ ಕಂಗಳ ಕಾಂತಿಗಳಿಂದನೇ ತಾನೇನೆ ಊರೆಲ್ಲ ಹೊಂಬೆಳಕು ನೀನು ಹೆಜ್ಜೆಯ ಇಟ್ಟಲ್ಲಲ್ಲೆಲ್ಲಾನು ಕಾಲಡಿ ಹೂವಾಗಿ ಬರಬೇಕು   ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು   ತಂಪು ತಂಗಾಳಿಯು ತಂದಾನ ಹಾಡಿತ್ತು ಕೇಳೋಕೆ ನಾ ಹೋದರೆ, ನಿನ್ನ ಈ, ಸರಿಗಮ ಕೇಳಿತು ಸಮಸಮ ಹಂಚಿತು   ಝುಳುಝುಳು ನೀರಿಲ್ಲಿ ತಿಲ್ಲಾನ ಹಾಡಿತ್ತು   ನೋಡೋಕೆ ನಾ ಬಂದರೆ, ನಿನ್ನದೇ ತಕಥೈ ಕಂಡಿತು ತಕಧಿಮಿ ಹೆಚ್ಚಿತು   ಅಲ್ಲೊಂದು ಸುಂದರ ತೋಟವಿದೆ, ಅಲ್ಲಿ ನೂರಾರು ಹೂಗಳ ರಾಶಿ ಇದೆ ಇಲ್ಲೊಂದು ಪ್ರೀತಿಯ ಹಾಡು ಇದೆ, ಇಲ್ಲಿ ಹತ್ತಾರು ಮೆಚ್ಚಿನ ಸಾಲು ಇದೆ ಎಲ್ಲ ಸಾಲಲ್ಲು ಇಣುಕೊ ಅಕ್ಷರ ನಿಂದೇನಾ?!   ಉತ್ತರ, ಇಲ್ಲದ, ಸಿಹಿ ಒಗಟು ನಿನ್ನಂದ ನಿನ್ನಂದ ನಿನ್ನಂದವೆ    ಭಲೆ ಭಲೆ ಚಂದದ ಚಂದುಳ್ಳಿ ಹೆಣ್ಣು ನೀನು ಮಿಂಚು ಕೂಡ ನಾಚುವ ಮಿಂಚಿನ ಬಳ್ಳಿ ನೀನು   ಅತ್ತ ಕಾಳಿದಾಸ, ಇತ್ತ ರವಿವರ್ಮ ನಿನ್ನ ಹ...